×
Ad

ಕತರ್ ಹೋಲ್ಡಿಂಗ್ ಕಂಪೆನಿಯಿಂದ ಭಾರತದಲ್ಲಿ ಭಾರೀ ಹೂಡಿಕೆ

Update: 2017-02-09 17:40 IST

ದೋಹ, ಫೆ.9: ಕತರ್ ಹೋಲ್ಡಿಂಗ್ ಕಂಪೆನಿ ಭಾರತದಲ್ಲಿ ಭಾರೀ ಹೂಡಿಕೆ ನಡೆಸಲು ಸಿದ್ಧವಾಗಿದೆ. ಭಾರತದ ಕಡಿಮೆ ವರಮಾನದವರಿಗಾಗಿ ವಸತಿ ಯೋಜನೆಯಲ್ಲಿ 250 ದಶಲಕ್ಷ ಡಾಲರ್ ಹೂಡಿಕೆ ನಡೆಸಲು ಕಂಪೆನಿ ಚಿಂತನೆ ನಡೆಸಿದೆ.

ಅರ್ಥಾ ದ ಫಂಡ್ ಮ್ಯಾನೇಜ್‌ಮೆಂಟ್ ಎನ್ನುವ ಸಂಸ್ಥೆಯ ಸಹಕಾರದಲ್ಲಿ ಕತರ್ ಹೋಲ್ಡಿಂಗ್ ಕಂಪೆನಿ ಬಂಡವಾಳ ಹೂಡಿಕೆ ಮಾಡಲಿದೆ. ಭಾರತದ ವಸತಿ ಯೋಜನೆಗಾಗಿ ಕತರ್ ಹೋಲ್ಡಿಂಗೆ 250 ದಶಲಕ್ಷ ಡಾಲರ್ ಹೂಡಿಕೆ ನಡೆಸಲಿದೆಯೆಂಬ ಸುದ್ದಿಯನ್ನು ಜರ್ಮನಿಯ ನ್ಯೂಸ್ ಏಜೆನ್ಸಿ ಬಹಿರಂಗಪಡಿಸಿದೆ. ಭಾರತದಲ್ಲಾಗುತ್ತಿರುವ ಜನಸಂಖ್ಯೆಯ ಹೆಚ್ಚಳ ಮತ್ತು ಮನೆಯ ಬೇಡಿಕೆಗಳನ್ನು ಗಮನದಲ್ಲಿಟ್ಟು ಇಂತಹ ಯೋಜನೆಗೆ ಬಂಡವಾಳ ಹಾಕಲು ಕಂಪೆನಿ ನಿರ್ಧರಿಸಿದೆ.

ಭಾರತದ ಜನಸಂಖ್ಯೆದರ ಪರಿಗಣಿಸಿದರೆ 2022ಕ್ಕಾಗುವಾಗ ಹತ್ತೊಂಬತ್ತು ದಶಲಕ್ಷ ಮನೆಗಳ ಅಗತ್ಯ ಸೃಷ್ಟಿಯಾಗಬಹುದು ಎಂದು ವರಿದಿಯಾಗಿದೆ.ಭಾರತದಲ್ಲಿ ಮೂರು ವಿಭಾಗಗಳ ಸಾಧಾರಣ ಪಟ್ಟಣಗಳಲ್ಲಿ ಕತರ್ ಹೋಲ್ಡಿಂಗ್ ಕಂಪೆನಿಯ ಸಹಕಾರದಲ್ಲಿ ವಸತಿ ಕೇಂದ್ರ ಎದ್ದು ನಿಲ್ಲಲಿದೆ.

ಅರ್ಥಾದ ಫಂಡ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಸಹಕಾರದಲ್ಲಿ ಹೌಸಿಂಗ್ ಯೋಜನೆಗೆ ಕತರ್ ಹೋಲ್ಡಿಂಗ್ ಶೇ.18ರಿಂದ, ಶೇ.21ರಷ್ಟು ಬಂಡವಾಳ ಹೂಡಿಕೆ ಮಾಡಲಿದೆ. ಕತರ್ ಹೋಲ್ಡಿಂಗ್ ದೇಶದ ಹೌಸಿಂಗ್ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುವ ಪ್ರಥಮ ವಿದೇಶಿ ಕಂಪೆನಿ ಎಂದು ಕಂಪೆನಿಯ ಮಾಜಿ ಸಿಇಒ ವಿಕ್ರಂ ಸಿಂಗ್ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News