ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವೈಬ ದಮಾಮ್ ಸಮಿತಿಗೆ ಚಾಲನೆ
ದಮಾಮ್, ಫೆ.11: ಕಿನ್ಯದಲ್ಲಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವೈಬಾ ಇದರ ದಮಾಮ್ ಸಮಿತಿಯು ರೂಪೀಕರಣವು ಅಕಾಡಮಿಯ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಸವಾದ್ ಫೈಝಿ ಪಲ್ಲತ್ತೂರು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ಖಾಸಿಂ ದಾರಿಮಿ ಮುಖ್ಯ ಭಾಷಣ ಮಾಡಿದರು
ಈ ವೇಳೆ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಅಝ್‌ಹರಿ ಕಿನ್ಯ, ಕೋಶಾಧಿಕಾರಿಯಾಗಿ ನವಾಝ್ ಕಿನ್ಯ, ಉಪಾಧ್ಯಕ್ಷರಾಗಿ ಹಮೀದ್ ನೆಟ್ಟಾರು, ಹಸನ್ ಕಾಟಿಪಳ್ಳ, ಕಾರ್ಯದರ್ಶಿಯಾಗಿ ಝಾಕಿರ್ ಹುಸೈನ್, ಸಂಘಟನಾ ಕಾರ್ಯದರ್ಶಿಯಾಗಿ ಶಮೀರ್ ಕಿನ್ಯರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನಿರ್ದೇಶಕರಾಗಿ ಇಸ್ಮಾಯೀಲ್ ಕಿನ್ಯ ಮತ್ತು ಪತ್ರಿಕಾ ಕಾರ್ಯದರ್ಶಿಯಾಗಿ ಮುತ್ತಲಿಬ್ ಕಜೆ, ಶಮೀರ್ ನೆಟ್ಟಾರು, ಹಮೀದ್ ಎಣ್ಮೂರು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸದಸ್ಯರಾಗಿ ಹಸನ್ ತವಮೊಗರು, ಬಶೀರ್ ಚಾರ್ಮಾಡಿ, ದಾವೂದ್ ಕೆ., ಶಾಫಿ ಚಾರ್ಮಾಡಿ, ಅಲ್ತಾಫ್, ಹೈದರ್ ತಲಮೊಗರು, ಮುಹಮ್ಮದ್ ತಲಮೊಗರು, ಇಸ್ಮಾಯೀಲ್ ತಲಮೊಗರು, ಶಂಸುದ್ದೀನ್ ತಲಮೊಗರು, ನೌಶಾದ್ ಮರವೂರು, ಆಸೀಫ್ ಕುಂಜತ್ತೂರು, ಅಸ್ಗರ್ ಕೆ., ಇಬ್ರಾಹೀಂ ಉಜಿರೆ, ಹಮೀದ್ ನೆಟ್ಟಾರು, ಇಸ್ಮಾಯೀಲ್ ಕಿನ್ಯ, ಅಬ್ದುಲ್ ಖಾದರ್ ಕಿನ್ಯ, ಅಬ್ಬು ಕಿನ್ಯ, ಹನೀಫ್ ಬೆಳ್ಮ, ಮುಹಮ್ಮದ್ ದೂಜರಕಟ್ಟೆ, ರಶೀದ್ ಉಳ್ಳಾಲ, ಶಾಫಿ ಪನೀರ್, ಖಾಲಿದ್ ಚಾರ್ಮಾಡಿ, ಶರೀಫ್ ಪನೀರ್, ಇಬ್ರಾಹೀಂ ಕೋಡಿ, ತಸ್ಲೀಮ್ ಮಂತಾದವರನ್ನು ಆರಿಸಲಾಯಿತು.