×
Ad

ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ವತಿಯಿದ ಮಾರ್ಚ್ 10ರಂದು ಕಬಡ್ಡಿ ಲೀಗ್

Update: 2017-02-11 19:26 IST

ಜಿದ್ದಾ, ಫೆ. 11: ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ವತಿಯಿಂದ ಮಾರ್ಚ್ 10 ರಂದು ನಡೆಯಲಿರುವ ಕಬಡ್ಡಿ ಲೀಗ್ - 2017 ಇದರ ಜರ್ಸಿ ಬಿಡುಗಡೆ ಸಮಾರಂಭವು ಫೆಬ್ರವರಿ 24ರಂದು ಜಿದ್ದಾದಲ್ಲಿ ನಡೆಯಲಿದೆ ಎಂದು ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ ಶರ್ಫುದ್ದೀನ್ ತಿಳಿಸಿದ್ದಾರೆ. ಅವರು ಫೆಬ್ರವರಿ 9ರಂದು ಜಿದ್ದಾದ ಅಝೀಝಿಯಾದಲ್ಲಿ ನಡೆದ ಪತ್ರಿಕಾಗೋಷಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಭಾರತೀಯ ಗಣರಾಜ್ಯೋತ್ಸವದ ಅಂಗವಾಗಿ ಜಿದ್ದಾದ ಶಬಾಬಿಯಾ ಮೈದಾನದಲ್ಲಿ ಫೆಬ್ರವರಿ 3ರಂದು ಕಬಡ್ಡಿ ಲೀಗ್ - 2017 ಪಂದ್ಯಾವಳಿಯನ್ನು ನಡೆಸಲುದ್ದೇಶಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಂತರ ಈ ಪಂದ್ಯಾವಳಿಯನ್ನು ಮಾರ್ಚ್ 10ಕ್ಕೆ ಮುಂದೂಡಲಾಯಿತು ಎಂದು ಅವರು ತಿಳಿಸಿದರು.

ಸೌದಿ ಅರೇಬಿಯಾದ ರಿಯಾದ್, ಜಿದ್ದಾ, ದಮಾಮ್, ಖೋಬರ್ ಹಾಗೂ ಇನ್ನಿತರ ಪ್ರದೇಶಗಳಿಂದ ಕಬಡ್ಡಿ ಪಂದ್ಯಾವಳಿಯಲ್ಲಿ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ದೇಹ ದಾರ್ಢ್ಯತೆಯ ಪ್ರತೀಕವಾದ ಭಾರತದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಚುರಪಡಿಸಬೇಕೆಂಬ ಉದ್ದೇಶವನ್ನು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಹೊಂದಿದೆ ಎಂದು ಅವರು ತಿಳಿಸಿದರು.

ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ನ ಉದ್ದೇಶದ ಕುರಿತು ಮಾತನಾಡಿದ ಅವರು ‘‘ಇದು ಅನಿವಾಸಿ ಭಾರತೀಯರನ್ನೊಳಗೊಂಡ ಒಂದು ಒಕ್ಕೂಟವಾಗಿದೆ. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಧ್ಯೆ ಭಾರತೀಯ ಕ್ರೀಡೆ ಮತ್ತು ವ್ಯಾಯಾಮಗಳನ್ನು ಹರಡುವ ಪ್ರಮುಖ ಉದ್ದೇಶವನ್ನು ಫೆಡರೇಶನ್ ಹೊಂದಿದೆ. ಅನಿವಾಸಿ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ಕ್ರೀಡೆಗಳ ಕುರಿತ ಒಲವುಂಟುಮಾಡುವುದು, ಕ್ರೀಡಾ ಪ್ರತಿಭೆಗಳಿಗೆ ಮನ್ನಣೆ ನೀಡುವುದು’’ ಮುಂತಾದ ಹಲವು ಉದ್ದೇಶಗಳನ್ನು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಹೊಂದಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಆರ್‌ಐ ಸ್ಪೋಟ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಕಲ್ಲಡ್ಕ ಹಾಗೂ ಇಲ್ಯಾಸ್ ಪಡುಬಿದ್ರಿ ಉಪಸ್ಥಿತರಿದ್ದರು.

ಮುಹಮ್ಮದ್ ಅಲಿ ಮಾಧ್ಯಮ ವಕ್ತಾರ, ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್
ಜಿದ್ದಾ, ಸೌದಿ ಅರೇಬಿಯಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News