×
Ad

ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಸೌದಿ ಯುವರಾಜನಿಗೆ ಸಿಐಎ ಪ್ರಶಸ್ತಿ

Update: 2017-02-11 20:54 IST

ರಿಯಾದ್, ಫೆ. 11: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಲ್ಲಿಸಿದ ಸೇವೆಗಾಗಿ ಸೌದಿಯ ಯುವರಾಜ ಮುಹಮ್ಮದ್ ಬಿನ್ ನಯೀಫ್‌ರನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಗೌರವಿಸಿದೆ.

ಉಪ ಪ್ರಧಾನಿ ಮತ್ತು ಆಂತರಿಕ ಭದ್ರತಾ ಸಚಿವರೂ ಆಗಿರುವ ನಯೀಫ್‌ರಿಗೆ ಸಿಐಎ ನಿರ್ದೇಶಕ ಮೈಕ್ ಪಾಂಪಿಯೊ ‘ಜಾರ್ಜ್ ಟೆನೆಟ್’ ಪದಕವನ್ನು ಪ್ರದಾನ ಮಾಡಿದರು.

ಸಿಐಎ ಮುಖ್ಯಸ್ಥರು ಶುಕ್ರವಾರ ರಿಯಾದ್‌ಗೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News