ಫೆ.24ರಂದು ರಿಯಾದ್‌ನಲ್ಲಿ ‘ದಿ ಲರ್ನ್ ಕುರ್‌ಆನ್ ಸಂಗಮ’

Update: 2017-02-14 11:29 GMT

ರಿಯಾದ್, ಫೆ.12: ದಾರುಲ್ ಇಲ್ಮ್ ರಿಯಾದ್ ಇದರ ವತಿಯಿಂದ ಮದ್ರಸ ಮಕ್ಕಳ ಕಾರ್ಯಕ್ರಮ ಹಾಗೂ ‘ದಿ ಲರ್ನ್ ಕುರ್‌ಆನ್ ಸಂಗಮ’ವು ಫೆ.24ರಂದು ರಿಯಾದ್‌ನ ಎಕ್ಸಿಟ್ 18ರಲ್ಲಿರುವ ನೂರ್ ಮಾಸ್ ಇಸ್ತಿರಾಹ್‌ನಲ್ಲಿ ನಡೆಯಲಿದೆ.

ಅಂದು ಅಪರಾಹ್ನ 3ರಿಂದ ರಾತ್ರಿ 9ರವರೆಗೆ ಮದ್ರಸ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರ್ಯಕ್ರಮ, ‘ಪರಲೋಕದಲ್ಲಿ ಉಪಕಾರಕ್ಕೆ ಸಿಗುವ ಮಕ್ಕಳು’ ಎಂಬ ವಿಷಯದಲ್ಲಿ ಅಬೂಬಕರ್ ಎಡತ್ತನಾಟ್ಟುಕರ ಅವರಿಗೆ ಪ್ರವಚನ, ಲರ್ನ್ ದಿ ಕುರ್‌ಆನ್ ಪಠ್ಯಪುಸ್ತಕ ಬಿಡುಗಡೆ, ‘ತೌಹೀದ್-ಪರಲೋಕ ವಿಜಯದ ಏಕೈಕ ಮಾರ್ಗ’ ಎಂಬ ವಿಷಯದಲ್ಲಿ ಅಬ್ದುಲ್ ಖಯ್ಯೂಮ್ ಉಳ್ಳಾಲ ಅವರಿಂದ ಪ್ರವಚನ ನಡೆಯಲಿದೆ. ಬಳಿಕ ಪ್ರತಿಭೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಕರ್ನಾಟಕ ಸಲಫಿ ಫೌಂಡೇಶನ್‌ನ ರಿಯಾದ್ ಘಟಕ ದೂ.ಸಂ.: 050 4137620/ 0507937093/ 0556424514 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News