ಮಲ್ಜಅ್ ರಿಯಾದ್ 2017 ನೆ ಸಾಲಿನ ಮಹಾಸಭೆ
ರಿಯಾದ್,ಫೆ.14 ಬಡ, ನಿರ್ಗತಿಕರ ಆಶಾಕೇಂದ್ರ ಮಲ್ಜಅ್ ದ್ದುಆತಿ ವದ್ದ ಅವತಿಲ್ ಇಸ್ಲಾಮಿಯ್ಯ, ಉಜಿರೆ ಇದರ ರಿಯಾದ್ ಸಮಿತಿಯ 2017 ನೇ ಸಾಲಿನ ಮಹಾಸಭೆ ಮಲ್ಜಅ್ ನ ಸಾರಥಿ ಸೈಯ್ಯದ್ ಜಲಾಲುದ್ದೀನ್ ತಂಙಳ್ ರವರ ನೇತೃತ್ವದಲ್ಲಿ ಫೆ.13 ರಂದು ರಾತ್ರಿ 9 ಗಂಟೆಗೆ ಬತ್ತಾದಲ್ಲಿ ನಡೆಯಿತು.
ಮಲ್ಜಅ್ ರಿಯಾದ್ ಅಧ್ಯಕ್ಷ ಉಮರ್ ಅಳಕೆಮಜಲು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆ.ಸಿ.ಎಫ್ ಸೌದಿ ರಾಷ್ಟೀಯ ಅಧ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಉದ್ಘಾಟಿಸಿ, ಮಾತನಾಡುತ್ತಾ ಬಡ, ನಿರ್ಗತಿಕರ ಆಶಾಕೇಂದ್ರವಾದ ಮಲ್ಜಅ್ ನ ಆಗು-ಹೋಗುಗಳ ಬಗ್ಗೆ ವಿವರಿಸಿದರು, ಈ ಸ್ಥಾಪನೆಯ ಬೆಳವಣಿಗೆಗೆ ಎಲ್ಲರೂ ಶಕ್ತಿ ಮೀರಿ ದುಡಿಯಲು ಪ್ರಯತ್ನಿಸಬೇಕೆಂದು ಇದೇ ಸಂದರ್ಭದಲ್ಲಿ ಹೇಳಿದರು.
ಮಲ್ಜಅ್ ರಿಯಾದ್ ನ ಪ್ರ.ಕಾರ್ಯದರ್ಶಿ ಸಲೀಂ ಕನ್ಯಾಡಿ 2016 ನೇ ಸಾಲಿನ ಲೆಕ್ಕಪತ್ತ ಹಾಗೂ ವರದಿ ಮಂಡಿಸಿದರು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಖಜಾಂಚಿ ಫಾರೂಕ್ ಅಬ್ಬಾಸ್ ಉಳ್ಳಾಲ್ ಹಾಗೂ ಕೆ.ಸಿ.ಎಫ್ ರಿಯಾದ್ ಅಧ್ಯಕ್ಷ ನಝೀರ್ ಕಾಶಿಪಟ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2017-18 ನೇ ಸಾಲಿಗೆ ನೂತನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು - ಇಸ್ಮಾಯಿಲ್ ಸಫಾರಿ
ಉಪಾದ್ಯಕ್ಷರುಗಳು: ಉಮರ್ ಅಳಕೆಮಜಲು ಹಾಗೂ ಅಬ್ದುಲ್ ರಹಿಮಾನ್ ಗಂಟಲುಕಟ್ಟೆ
ಪ್ರ.ಕಾರ್ಯದರ್ಶಿ: ಅಬ್ದುಲ್ ರಹಿಮಾನ್, ಜೋಗಿಬೆಟ್ಟು
ಜತೆ ಕಾರ್ಯದರ್ಶಿಗಳು: ಇಬ್ರಾಹಿಂ ಮುರ ಹಾಗೂ ಬಶೀರ್ ಮೂರುಗೋಳಿ
ಖಜಾಂಚಿ: ಅಬೂಬಕ್ಕರ್ ಸಾಲೆತ್ತೂರು
ಸಲಹೆಗಾರರು: ಡಿ.ಪಿ ಯೂಸುಫ್ ಸಖಾಫಿ ಬೈತಾರ್, ಫಾರೂಕ್ ಅಬ್ಬಾಸ್ ಉಳ್ಳಾಲ್, ನಝೀರ್ ಕಾಶಿಪಟ್ನ ಹಾಗೂ ಅಬ್ದುಲ್ಲಾ ಮದನಿ ಸಹಿತ ಒಟ್ಟು 25 ಮಂದಿಯ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಮಲ್ಜಅ್ ರಿಯಾದ್ ಆರ್ಗನೈಸರ್ ಶರೀಫ್ ಮದನಿ ಸ್ವಾಗತಿಸಿದರೆ, ನೂತನ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಜೋಗಿಬೆಟ್ಟು ವಂದಿಸಿದರು.
ಸಭೆಯ ಕೊನೆಯಲ್ಲಿ ಮಲ್ಜಅ್ ತಂಙಳ್ ರವರು ದುಆ ನೆರವೇರಿಸಿದರು.