ದುಬೈ: ಜುಲೈ ವೇಳೆಗೆ ಹೋವರ್ ಟ್ಯಾಕ್ಸಿ ಸೇವೆ

Update: 2017-02-14 15:13 GMT

ದುಬೈ, ಫೆ. 14: ಚೀನಾದ ಪ್ರಾಯೋಗಿಕ ಸ್ವಯಂಚಾಲಿತ ಹೋವರ್ ಟ್ಯಾಕ್ಸಿ (ಸೀಮಿತ ದೂರಕ್ಕೆ ಹಾರುವ ಸಣ್ಣ ಖಾಸಗಿ ವಿಮಾನ)ಯನ್ನು ದುಬೈಯಲ್ಲಿ ಸೋಮವಾರ ಪರೀಕ್ಷೆಗೊಳಪಡಿಸಲಾಗಿದೆ. ವಿಮಾನವನ್ನು ಜುಲೈ ತಿಂಗಳ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಉದ್ದೇಶವನ್ನು ದುಬೈ ಹೊಂದಿದೆ.

2030ರ ವೇಳೆಗೆ ತನ್ನ ಸಾರಿಗೆ ವಿಧಾನಗಳ ಕಾಲು ಭಾಗವನ್ನು ಸ್ವಯಂಚಾಲಿತೊಳಿಸುವ ದುಬೈಯ ಯೋಜನೆಗೆ ಪೂರಕವಾಗಿ ಓರ್ವ ವ್ಯಕ್ತಿ ಕುಳಿತುಕೊಳ್ಳಬಹುದಾದ ಇಲೆಕ್ಟ್ರಿಕ್ ವಾಹನದ ಪರೀಕ್ಷಾ ಹಾರಾಟವನ್ನು ನಡೆಸಲಾಗಿದೆ.

‘ಇಹ್ಯಾಂಗ್ 184’ ಎಂಬ ಏಕ ಆಸನದ ವಿಮಾನವು ನಿರ್ದಿಷ್ಟ ದಾರಿಯಲ್ಲಿ 300 ಮೀಟರ್ ಎತ್ತರದಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗುತ್ತದೆ ಎಂದು ದುಬೈ ಸಾರಿಗೆ ಪ್ರಾಧಿಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರಯಾಣಿಕನು ತಾನು ಹೋಗಬೇಕಾದ ಸ್ಥಳವನ್ನು ಆಯ್ಕೆಮಾಡಿದರೆ, ವಿಮಾನವು ಮೇಲೇರುತ್ತದೆ, ನಿಗದಿತ ದಾರಿಯಲ್ಲಿ ಹಾರುತ್ತದೆ ಹಾಗೂ ನಿರ್ದಿಷ್ಟ ಸ್ಥಳದಲ್ಲಿ ಭೂಸ್ಪರ್ಶ ಮಾಡುತ್ತದೆ. ವಿಮಾನವನ್ನು ಭೂನಿಯಂತ್ರಣ ಕೇಂದ್ರವೊಂದರಿಂದ ನಿಯಂತ್ರಿಸಲಾಗುತ್ತದೆ.

ಚೀನಾದ ಡ್ರೋನ್ ತಯಾರಕ ಕಂಪೆನಿ ಇಹ್ಯಾಂಗ್ ನಿರ್ಮಿಸಿರುವ ವಾಹನವು ಎರಡು ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ ಹಾಗೂ 30 ನಿಮಿಷಗಳ ಕಾಲ ಹಾರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News