ಕಂಧಹಾರ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಯುಎಇ ರಾಯಭಾರಿ ನಿಧನ

Update: 2017-02-15 15:23 GMT

ಅಬುದಾಭಿ,ಫೆ.15: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಕಳೆದ ತಿಂಗಳು ನಡೆದ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಫ್ಘಾನ್‌ನಲ್ಲಿನ ಯುಎಇ ರಾಯಭಾರಿ ಜುಮಾ ಅಲ್ ಕಾಬಿ, ಬುಧವಾರ ಕೊನೆಯುಸಿರೆಳೆದಿದ್ದಾರೆ.

 ಕಂದಹಾರ್‌ನಲ್ಲಿ ಜನವರಿ 10ರಂದು, ಅನಾಥಾಶ್ರಮವೊಂದರ ಉದ್ಘಾಟನೆ ಸಮಾ ರಂಭದಲ್ಲಿ ಬಾಂಬ್ ಸ್ಪೋಟ ನಡೆದಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುಎಇನ ಐವರು ರಾಜತಾಂತ್ರಿಕರು ಸೇರಿದಂತೆ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಯುಎಇ ರಾಯಭಾರಿ ಜುಮಾ ಅಲ್ ಕಾಬಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದರು. ಕಂದಹಾರ್‌ನ ಪ್ರಾಂತೀಯ ಗವರ್ನರ್ ಹುಮಾಯೂನ್ ಅಝೀಝಿ ಕೂಡಾ ಸ್ಫೋಟದಲ್ಲಿ ಗಾಯಗೊಂಡಿದ್ದರು.

ಆದರೆ ಬಾಂಬ್ ದಾಳಿಯಲ್ಲಿ ತನ್ನ ಪಾತ್ರವಿರುವುದನ್ನು ತಾಲಿಬಾನ್ ನಿರಾಕರಿಸಿತ್ತು. ಸ್ಥಳೀಯ ಗುಂಪುಗಳ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ ಸ್ಫೋಟ ನಡೆದಿದೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News