ನೂರುಲ್ ಹುದಾ ದೇರಾ ನಕೀಲ್ ಕ್ಲಸ್ಟರ್ ಅಸ್ಥಿತ್ವಕ್ಕೆ

Update: 2017-02-15 17:21 GMT

ದುಬೈ,ಫೆ.15 : ದಾರುಲ್ ಹುದಾ ಚೆಮ್ಮಾಡ್ ಇದರ ಅಂಗ ಸಂಸ್ಥೆಯಾದ ಕರ್ನಾಟಕದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ ನಕೀಲ್ ಕ್ಲಸ್ಟರ್ ರೂಪೀಕರಣ ಕಾರ್ಯಕ್ರಮವು ಫೆ.10 ರಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಜನಾಬ್ ಮುನೀರ್ ಸಾಲ್ಮರ ರವರ ನಿವಾಸದಲ್ಲಿ ನಡೆಯಿತು.

ನೂರುಲ್ ಹುದಾ ದುಬೈ ಸಮಿತಿಯ ಅದ್ಯಕ್ಷರಾದ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗರವರ ಅದ್ಯಕ್ಷತೆಯಲ್ಲಿ ಆರಂಭವಾದ ಸಭೆಯಲ್ಲಿ ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿಯವರು ನೆರೆದವರನ್ನು ಸಭೆಗೆ  ಹಾರ್ಧಿಕವಾಗಿ ಸ್ವಾಗತಿಸಿದರು.

ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗರವರು ಮಾತನಾಡಿ ಈ ಲೋಕದಲ್ಲಿ ನಾವೆಲ್ಲರೂ ಒಂಟಿ ಜೀವನ ನಡೆಸಲು ಇಷ್ಟ ಪಡುವುದಿಲ್ಲ, ಇಲ್ಲಿ ನಮಗೆ ದಿನ ದೂಡಲು ಸಂಗಾತಿಗಳು ಬೇಕು, ಸ್ನೇಹಿತರು ಬೇಕು ಆದರೆ ಮರಣದ ನಂತರ ಕಬರ್ ನಲ್ಲಿ ನಾವು ಒಂಟಿಯಾಗಿರಬೇಕಾಗುತ್ತದೆ. ಧಾರ್ಮಿಕ ವಿದ್ಯಾ ಸಂಸ್ಥೆಗಳಿಗೆ ಸಹಾಯ ಸಹಕಾರಗಳನ್ನು ಮಾಡುವುದರಿಂದ ಮತ್ತು ದಾನಗಳಿಂದ ಮರಣದ ನಂತರ ಅದರ ಪ್ರತಿಫಲ ನಮಗೆ ಲಭಿಸುತ್ತಲೇ ಇರುತ್ತದೆ ಎಂದು ಹೇಳಿದರು. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ವಿಶ್ವ ವಿಖ್ಯಾತ ದಾರುಲ್ ಹುದಾ ಚೆಮ್ಮಾಡ್ ಇಸ್ಲಾಮಿಕ್ ವಿಶ್ವ ವಿದ್ಯಾಲಯ ಇದರ ಅಂಗ ಸಂಸ್ಥೆಯಾದ ಕರ್ನಾಟಕದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಭಾಗವಾಗಿ ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ವಿದ್ಯಾ ಸಂಸ್ಥೆಯ ಉನ್ನತಿಗಾಗಿ ವಿನಿಯೋಗಿಸಬೇಕು ಎಂದರು. 

ನೂರುಲ್ ಹುದಾ ದುಬೈ ಸಮಿತಿಯ ಕಾರ್ಯಾದ್ಯಕ್ಷರಾದ ಜನಾಬ್ ಅನ್ವರ್ ಮಣಿಲರವರು ಚುನಾವಣಾ ಅಧಿಕಾರಿಯಾಗಿ ಮಾತನಾಡಿ ಯು.ಎ.ಇ ಯಲ್ಲಿ ನೂರುಲ್ ಹುದಾ ಸಮಿತಿಯ ಕಾರ್ಯವಿಧಾನಗಳನ್ನು ವಿವರಿಸಿ ನೂರುಲ್ ಹುದಾ ನಕೀಲ್ ಕ್ಲಸ್ಟರ್ ಸಮಿತಿಗೆ ಮತ್ತು ಆಯ್ಕೆಯಾಗುವ ಪಧಾದಿಕಾರಿಗಳ ಜವಾಬ್ದಾರಿಗಳನ್ನು ತಿಳಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂರುಲ್ ಹುದಾ ನಕೀಲ್ ಕ್ಲಸ್ಟರ್ ಪದಾಧಿಕಾರಿಗಳ ವಿವರ :

ಗೌರವಾಧ್ಯಕ್ಷರು : ಅಬೂಬಕ್ಕರ್ ಹಾಜಿ

ಅದ್ಯಕ್ಷರು : ಮುನೀರ್ ಸಾಲ್ಮರ

ಪ್ರಧಾನ ಕಾರ್ಯದರ್ಶಿ : ಅಶ್ರಫ್ ಕಾರ್ಜಲ್ 

ಕೋಶಾಧಿಕಾರಿ : ಯಾಸಿರ್ ಕರಿಮಜಲ್

ಉಪಾಧ್ಯಕ್ಷರು : ಝುಬೈರ್ ಪಡೀಲ್, ಇಕ್ಬಾಲ್ ಅರ್ಶದಿ, ಸಿದ್ದೀಕ್ ಅಕ್ಕೆರಂಗಡಿ

ಕಾರ್ಯದರ್ಶಿಗಳು : ಮುಸ್ತಫಾ ಕಕ್ಕಿಂಜೆ, ನಿಝಾಮ್ ಕಾರ್ಜಲ್ 

ಉಪದೇಶಕರು: ನೂರ್ ಮುಹಮ್ಮದ್ ನೀರ್ಕಜೆ, ಹಮೀದ್ ಮಣಿಲ, ಅನ್ವರ್ ಮಣಿಲ, ಝಕರಿಯ ಮುಲಾರ್

ಸಂಘಟನಾ ಕಾರ್ಯದರ್ಶಿ : ರಫೀಕ್ ಸಾಲ್ಮರ 

ಸಂಚಾಲಕರು: ಹಿದಾಯತ್ ಆಲಡ್ಕ, ಜಾಬಿರ್ ಬೆಟ್ಟಂಪಾಡಿ, ಸಿದ್ದೀಕ್ ಕಾರಾಜೆ, ಇಬ್ರಾಹಿಂ ಆತೂರು, ಬಷೀರ್ ಅರಿಯಡ್ಕ, ಹಾರಿಸ್ ಮಲಾರ್, ಅನ್ಸಾಫ್ ಸಾಲ್ಮರ, ಮುಸ್ತಫಾ ಕಾರಾಜೆ, ಸಮದ್ ಕೆದಿಲ.

ಧಾರ್ಮಿಕ ಸಲಹೆಗಾರರು: ಹಮೀದ್ ಮುಸ್ಲಿಯಾರ್ ನೀರ್ಕಜೆ 

ಕಾರ್ಯಕಾರಿ ಸಮಿತಿ ಸದಸ್ಯರು : ಮನಾಫ್ ಕಾಸರಗೋಡು, ಜಲೀಲ್ ವಿಟ್ಲ, ಇಸಾಕ್ ಸಾಲೆತ್ತೊರು, ನಿಝಾರ್ ಕ್ಯಾಲಿಕಟ್, ಶಫೀಕ್ ಬನ್ನೂರು, ಜಮಾಲುದ್ದೀನ್ ದೇಲಂಪಾಡಿ, ಮುಹಮ್ಮದ್ ಝುಬೈರ್ ಕಾಸರಗೋಡು, ಮುಹಮ್ಮದ್ ಮಸೂದ್ ಉಜಿರೆ, ಅಕ್ಬರ್ ಪಡೀಲ್, ಇಸ್ಮಾಯಿಲ್ ಅರಿಯಡ್ಕ, ಇಸ್ಮಾಯಿಲ್ ಕೋಡಿ.

ಅನ್ವರ್ ಮಣಿಲರವರು ಚುನಾವಣಾ ಅಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನೂತನ ಸಮಿತಿಗೆ ಶುಭ ಹಾರೈಸಿದರು. 

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಶರೀಫ್ ಕಾವುರವರು ನೂತನ ಸಮಿತಿಗೆ ಶುಭ ಹಾರೈಸಿ  ಮಾತನಾಡಿ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಈಗಾಗಲೇ 90 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ ಮತ್ತು ವರ್ಷಂಪ್ರತಿ ನಲವತ್ತೈದರಿಂದ ನಲವತ್ತೆಂಟು ವಿದ್ಯಾರ್ಥಿಗಳನ್ನು ವಿಶೇಷ ಅಹ್ರತಾ ಪರೀಕ್ಷೆಯ ಮೂಲಕ ಸೇರಿಸಿಕೊಳ್ಳಲಾಗುತ್ತದೆ. ಅವರಿಗೆ ತರಗತಿ ಮತ್ತು ವಸತಿ ಸೌಕರ್ಯ ಕಲ್ಪಿಸಲು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್ ಕಟ್ಟಡದ ಕಾಮಗಾರಿಯು ಈಗಾಗಲೇ ಪ್ರಾರಂಭಗೊಂಡಿದೆ ಮತ್ತು ಕೆಲಸಗಳು ವೇಗವಾಗಿ ನಡೆಯುತ್ತಿದೆ ಎಂದು ಹೇಳುತ್ತಾ ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರಿಸಿ ಎಲ್ಲರೂ ನೂರುಲ್ ಹುದಾ ಅಕಾಡೆಮಿಯ ಉನ್ನತಿಗಾಗಿ ಶ್ರಮಿಸಬೇಕೆಂದು ಕೇಳಿಕೊಂಡರು. ನೂರುಲ್ ಹುದಾ ದುಬೈ ಸಮಿತಿಯ ಲೆಕ್ಕ ಪರಿಶೋಧಕರಾದ ಜನಾಬ್ ಅಶ್ರಫ್ ಪರ್ಲಡ್ಕ ರವರು ಕಾರ್ಯಕ್ರಮದಲ್ಲಿ ಸಂದರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ನೂರುಲ್ ಹುದಾ ನಕೀಲ್ ಕ್ಲಸ್ಟರ್ ನೂತನ ಪ್ರಧಾನ ಕಾರ್ಯದರ್ಶಿ ಜನಾಬ್ ಅಶ್ರಫ್ ಕಾರ್ಜಲ್ ರವರು ಮಾತನಾಡಿ ನೂರುಲ್ ಹುದಾ ವಿದ್ಯಾ ಸಂಸ್ಥೆಯ ಭಾಗವಾಗಲು ಸಿಕ್ಕಿರುವ ಅವಕಾಶಕ್ಕಾಗಿ ಸಂತಸ ವ್ಯಕ್ತಪಡಿಸಿ ಸಮಿತಿಯ ಅಭಿವೃದ್ಧಿಗೆ ಶ್ರಮಿಸುವ ಭರವಸೆಯನ್ನು ನೀಡಿದರು. ನೂತನ ಉಪಾಧ್ಯಕ್ಷರಾದ  ಜನಾಬ್ ಸಿದ್ದೀಕ್ ಅಕ್ಕೆರಂಗಡಿ ಮತ್ತು ಸಂಚಾಲಕರು  ಸಿದ್ದೀಕ್ ಕಾರಾಜೆಯವರು ಮಾತನಾಡಿ ವಿದ್ಯಾ ಸಂಸ್ಥೆ ಅಬಿವೃದ್ದಿಗಾಗಿ ಸಮಿತಿಯನ್ನು ಉತ್ತಮವಾಗಿ ಮುನ್ನಡೆಸಲು ಪ್ರಯತ್ನಿಸುವ ಭರವಸೆಯನ್ನು ನೀಡುತ್ತಾ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು.

ನೂರುಲ್ ಹುದಾ ನಕೀಲ್ ಕ್ಲಸ್ಟರ್ ಸಂಚಾಲಕರು ಮತ್ತು ಯು.ಎ.ಇ ಸಮಿತಿಯ ಇವೆಂಟ್ ಕೋ-ಆರ್ಡಿನೇಟರ್ ಜನಾಬ್ ಜಾಬಿರ್ ಬೆಟ್ಟಂಪಾಡಿ ಯವರು ನೂತನ ಸಮಿತಿಗೆ ಶುಭ ಹಾರೈಸಿ ಧನ್ಯವಾದಗೈದರು

Writer - ವರದಿ: ಅಝೀಝ್ ಸೋಂಪಾಡಿ

contributor

Editor - ವರದಿ: ಅಝೀಝ್ ಸೋಂಪಾಡಿ

contributor

Similar News