ಬಹ್ರೈನ್‌ನಲ್ಲಿ ಫ್ಲೆಕ್ಸಿಬಲ್ ವರ್ಕ್‌ಪರ್ಮಿಟ್ ಎಪ್ರಿಲ್‌ನಿಂದ

Update: 2017-02-16 13:25 GMT

ಮನಾಮ,ಫೆ.16: ಕಾನೂನಾತ್ಮಕ ದಾಖಲೆಗಳಿಲ್ಲದೆ ಕಷ್ಟಪಡುತ್ತಿರುವ ಬಹ್ರೈನ್‌ನಲ್ಲಿರುವ ವಿದೇಶಿ ಕಾರ್ಮಿಕರಿಗೆ ಅನುಗ್ರಹೆವೆನ್ನಲಾದ ಫ್ಲೆಕ್ಸಿಬಲ್ ವರ್ಕ್‌ಪರ್ಮಿಟ್ ಈ ವರ್ಷದ ಎಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಲೇಬರ್ ಮಾರ್ಕೆಟ್ ರೆಗ್ಯುಲೇಟಿ ಅಥಾರಿಟಿ(ಎಲ್ ಎಂ ಆರ್‌ಎ) ಹೇಳಿದೆ.

ಅನಧಿಕೃತವಾಗಿ ಬಂದು ಕೆಲಸ ಮಾಡುತ್ತಿರುವ ವಿದೇಶಿಗಳಿಗೆ ಈ ವರ್ಕ್‌ಪರ್ಮಿಟ್ ಜಾರಿಗೆ ಬಂದರೆ ಅಧಿಕೃತವಾಗಿ ಕಾನೂಬದ್ಧವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ಪರ್ಮಿಟ್ ಪ್ರಕಾರ ಸ್ವಯಂ ಸ್ಪೋನ್ಸರ್ ಮಾಡಲು ಮತ್ತು ಹಲವು ಸ್ಪೋನ್ಸರ್‌ಗಳ ಅಧೀನದಲ್ಲಿ ಕೆಲಸ ಮಾಡಲು ಅವಕಾಶವಿದೆ.

ವಿಸಿಟಿಂಗ್ ವೀಸಾದಲ್ಲಿ ಇರುವವರು ಮತ್ತು ಸ್ಪೊನ್ಸರ್‌ನಿಂದ ತಪ್ಪಿಸಿಕೊಂಡು ಓಡಿ ಹೋದವರು (ರನ್ ಐವೆ) ಕ್ರಿಮಿನಲ್ ಪ್ರಕರಣದಲ್ಲಿ ಪಾಲ್ಗೊಂಡವರಿಗೆ ಈ ಸೌಲಭ್ಯ ದೊರೆಯುವುದಿಲ್ಲ. ಈ ವರ್ಷ ಎಪ್ರಿಲ್‌ನಿಂದ ಎರಡು ವರ್ಷಗಳಿಗೆ ಯೋಜನೆ ಜಾರಿಗೊಳಿಸಲಾಗುತಿದೆಎಲ್ ಎಂ ಆರ್ ಐ ಚೀಫ್ ಎಕ್ಸಿಕ್ಯೂಟಿವ್ ಉಸಾಮಾ ಅಲ್ ಅಬ್ಸಿ ಹೇಳಿದ್ದಾರೆ. ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಬಹ್ರೈನ್, ಡಿಪ್ಲೊಮೇಟ್ ರಾಡಿಸನ್ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ತಿಳಿಸಿದ್ದಾರೆ.

ಹೊಸ ಯೋಜನೆಯಲ್ಲಿ ಕಾರ್ಮಿಕನೇ ವರ್ಕ್‌ಪರ್ಮಿಟ್‌ಗೆ ಅರ್ಜಿಹಾಕಿಕೊಳ್ಳಬೇಕು. ಈ ವರ್ಕ್ ಪರ್ಮಿಟನ್ನು ಪಡೆಯುವ ಕಾರ್ಮಿಕನಿಗೆ ಯಾರ ಬಳಿಯೂ ಕೆಲಸ ಮಾಡಬಹುದಾಗಿದೆ. ಗಂಟೆಯಾಧಾರಿತ ಕೆಲಸವನ್ನೋ ದಿನಾಧಾರಿತ ಕೆಲಸವನ್ನೊ ಅತ ಮಾಡಬಹುದು. ಕಾರ್ಮಿಕನಿಗೆ ಒಂದೇ ಕೆಲಸದ ಮಾಲಕನ ಜೊತೆ ಮತ್ತು ಹಲವು ಕೆಲಸದ ಮಾಲಕರಜೊತೆ ಏಕ ಕಾಲದಲ್ಲಿ ಕೆಲಸ ಮಾಡುವ ಅವಕಾಶವಿದೆ. ವಾಸ, ಸೋಶಿಯಲ್ ಇನ್ಶೂರೆನ್ಸ್, ಆರೋಗ್ಯ ರಕ್ಷೆ ಮುಂತಾದ ವಿಷಯಗಳ ಜವಾಬ್ದಾರಿಯನ್ನು ಸ್ವಯಂ ಕಾರ್ಮಿಕನೇ ಭರಿಸಬೇಕು.

2016 ಸೆಪ್ಟಂಬರ್ 20ವರೆಗೆ ಅನಧಿಕೃತ ಕಾರ್ಮಿಕರಾಗಿ ಘೋಷಿಸಲ್ಪಟ್ಟಿರುವವರಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪ್ರತಿ ತಿಂಗಳಿಗೆ 2,000 ವರ್ಕ್‌ಪರ್ಮಿಟ್ ಎನ್ನುವಂತೆ ಎರಡು ವರ್ಷಗಳ 48,000 ವರ್ಕ ಪರ್ಮಿಟ್ ನೀಡಲಾಗುವುದು.

ಪರ್ಮಿಟ್‌ನ ಅವಧಿ ಎರಡು ವರ್ಷಗಳಾಗಿವೆ. ಪ್ಲೆಕ್ಸಿಬಲ್ ಫರ್ಮಿಟ್‌ಗೆ 200 ದಿರ್‌ಹಂ ಶುಲ್ಕ ತೆರಬೇಕಾಗಿದೆ. ಹೆಲ್ತ್ ಕೇರ್‌ಗೆ 144 ದೀನಾರ್ ಮತ್ತು ಪ್ರತಿತಿಂಗಳ ಶುಲ್ಕ ಮೂವತ್ತು ದೀನಾರ್ ನೀಡಬೇಕಿದೆ. ಹಾಗೂ ಸಾಮಾನ್ಯ ಉದ್ಯೋಗ ವೀಸಾಕ್ಕೆ ಎಲ್ ಎಂಆರ್ ಐ ಪ್ರತಿ ತಿಂಗಳು 10 ದೀನಾರ್ ಪಡೆಯುತ್ತಿದೆ.

ಪ್ಲೆಕ್ಸಿಬಲ್ ವರ್ಕ್ ಪರ್ಮಿಟ್ ಸಿಗುವ ಕಾರ್ಮಿಕರಿಗೆ ಫೋಟೊ ಅಂಟಿಸಿದ ಸಮಯಾವಧಿ ಸೂಚಿಸಿದ ನೀಲಿ ಬಣ್ಣದ ವಿಶೇಷ ಕಾರ್ಡನ್ನು ನೀಡಲಾಗುವುದು. ಪೈಲೆಟ್ ಪ್ರೋಜೆಕ್ಟ್ ಎನ್ನುವ ನಿಟ್ಟಿನಲ್ಲಿ ಎಪ್ರಿಲ್ ನಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು ಸಾವಿರಾರು ಅನಧಿಕೃತ ವಿದೇಶಿ ಕಾರ್ಮಿಕರಿಗೆ ಇದು ಪ್ರಯೋಜನವಾಗಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News