ಫೆಬ್ರವರಿ 24 ಕ್ಕೆ ಅಬುಧಾಬಿ ಯಲ್ಲಿ ಮಂಗಳೂರು ಕಪ್ – 2017

Update: 2017-02-16 18:55 GMT

ಅಬುಧಾಬಿ: ವರ್ಷಂಪ್ರತಿ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಐದನೇ ಸೀಸನ್ ಮಂಗಳೂರು ಕಪ್ 2017 ಫೆಬ್ರವರಿ 24 ಶುಕ್ರವಾರ ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪ್ರಕಟನೆಯಲ್ಲಿ ತಿಳಿಸಿದೆ.
ಕಳೆದ ನಾಲ್ಕು ಸೀಸನ್ ಗಳಲ್ಲಿ ಶೇಖ್ ಝಾಯಿದ್ ಓವೆಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆದು ಬಂದಿದ್ದು. ಈ ಬಾರಿ ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಸರಣಿ ನಡೆಯುವ ಮುಖ್ಯ ಮೈದಾನದಲ್ಲಿ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿರುವುದು ಸಂಘಟಕರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಇನ್ನಷ್ಟು ಹುಮ್ಮಸ್ಸನ್ನು ನೀಡಲಿದೆ.

  ಪಂದ್ಯಾಟದ ನೇರ ಪ್ರಸಾರ, ವೀಕ್ಷಕರಿಗಾಗಿ ಹತ್ತು ಹಲವು ಆಟಗಳು, ಲಕ್ಕಿಡ್ರಾ, ಯೂನಿವರ್ಸಲ್ ಹಾಸ್ಪಿಟಲ್ ವತಿಯಿಂದ ಉಚಿತ ಅರೋಗ್ಯ ತಪಾಸಣೆ, ಯುನಿಲಿವೆರ್ ನ ಪ್ರಾಡಕ್ಟ್ ಗಳ ಉಚಿತ ವಿತರಣೆ, ಊಟದ ವ್ಯವಸ್ಥೆ ಇರುವುದರಿಂದ ಐದು ಸಾವಿರಕ್ಕೂ ಮಿಕ್ಕ ವೀಕ್ಷಕರನ್ನು ಹೊಂದುವ ನೀರಿಕ್ಷೆಯನ್ನು ಸಂಘಟಕರು ವ್ಯಕ್ತ ಪಡಿಸಿದ್ದಾರೆ.

 ಪೈಪೋಟಿಯುತ ಹಣಾಹಣಿ ನಿರೀಕ್ಷಿತ ಪಂದ್ಯಾವಳಿಯಲ್ಲಿ ಹಾರ್ಡ್ ಟೆನಿಸ್ :
  ಋ್ಕಿಐ ಚೆಂಡು ಬಳಕೆಯಾಗಲಿದ್ದು, ಪಂದ್ಯ ವು ನಿರ್ದಿಷ್ಟ ಆರು ಓವರ್ ಗಳಿಗೆ ಸೀಮಿತವಾಗಿದೆ. ಪ್ರವಾಸಿ ಭಾರತೀಯತಂಡಗಳಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ ಭಾರತೀಯ ಕ್ರಿಕೆಟಿಗರನ್ನು ಮಾತ್ರ ಹೊಂದಿರಬೇಕೆಂಬ ನಿಬಂಧನೆ ಇರುವುದಾಗಿಸಂಘಟಕರು ವ್ಯಕ್ತಪಡಿಸಿದ್ದಾರೆ.

 ಈ ಸಂಧರ್ಭದಲ್ಲಿ ಮಂಗಳೂರು ಕಪ್ ಮೈಲಿಗಲ್ಲುಗಳು ಎಂಬ ಕಿರುಹೊತ್ತಿಗೆಯನ್ನೂ ಸಂಘಟಕರು ಪ್ರಕಾಶನ ಮಾಡಲಿದ್ದಾರೆ.
  ಕಳೆದ ಬಾರಿ 28 ತಂಡಗಳು ಯುಎಇ ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟ್ ಗಳಿಂದ ಆಗಮಿಸಿ ಕದನ ಕುತೂಹಲ ಕೆರಳಿಸಿತ್ತು. 2013 ಫೈನಲ್ ಹಣಾಹಣಿಯಲ್ಲಿ ಸುರತ್ಕಲ್ ಸ್ಟಾರ್ ಟ್ರೋಫಿಯನ್ನು ತನ್ನ ಬಗಲಿಗೆ ಹಾಕಿಕೊಂಡರೆ ನಫೀಸ್ದುಬೈ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 2014 ರ ಫೈನಲ್ ನಲ್ಲಿ ಯಂಗ್ ಇಂಡಿಯನ್ಸ್ ಮತ್ತು ಸಿತಾರ ಕ್ರಿಕೆಟರ್ಸ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿತ್ತು. 2015 ರ ಜಿದ್ದಾಜಿದ್ದಿನ ಹೋರಾಟದಲ್ಲಿ ಸುರತ್ಕಲ್ ಸ್ಟಾರ್ಸ್ ವಿಜಯ ದುಂದುಭಿ ಮೊಳಗಿಸಿದರೆ ಆಕ್ಸ್ಫರ್ಡ್ ಮರೀನ್ ತಂಡ ರನ್ನರ್ ಅಪ್ ಆಗಿ ಮೂಡಿಬಂದಿತ್ತು. 2016 ರ ರೋಚಕ ಫೈನಲ್ ನಲ್ಲಿ ಫ್ರೈಡೆಚಾರ್ಜರ್ಸ್ ತಂಡ ಮತ್ತು ಆಕ್ಸ್ಫರ್ಡ್ ಮರೀನ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿ ಜಯಭೇರಿ ಬಾರಿಸಿತ್ತು.

ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ :
  ಪ್ರಥಮ ಸ್ಥಾನ ಟ್ರೋಫಿ ಮತ್ತು 12222/ -AED ಮೊತ್ತ
 ರನ್ನರ್ ಅಪ್ ಟ್ರೋಫಿ ಮತ್ತು 6222/ -AED ಮೊತ್ತ
ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗು ಫೈನಲ್ ಪಂ ಪುರುಷೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲೀಗ್ ಹಂತದ ಪ್ರತೀ ಪಂದ್ಯಗಳಲ್ಲಿ ಕೂಡ ಪಂದ್ಯ ಪುರುಷೋತ್ತಮ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ವೀಕ್ಷಕರಿಗೆ ಮತ್ತು ಆಟಗಾರರಿಗೆ ಹತ್ತುಹಲವು ಆಕರ್ಷಕ ಬಹುಮಾನಗಳನ್ನೂ ಪಡೆಯುವ ಸದಾವಕಾಶವಿದೆ. ಈ ಪಂದ್ಯಾವಳಿಯ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ.

 ಅನಿವಾಸಿ ಕನ್ನಡಿಗರಲ್ಲಿ ಕ್ರೀಡಾಪ್ರೇಮವನ್ನು ಹುರಿದುಂಬಿಸುವ ಸಲುವಾಗಿ ಹುಟ್ಟಿಕೊಂಡ ಮಂಗಳೂರು ಕ್ರಿಕೆಟ್ ಕ್ಲಬ್ ವರ್ಷಂಪ್ರತಿ ಈ ಪಂದ್ಯಾವಳಿಯನ್ನು ನಡೆಸಿಕೊಂಡು ಹೋಗುವ ಗುರಿಹೊಂದಿದೆ. ತಂಡಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು. ಭಾಗವಹಿಸಲಿಚ್ಚಿಸುವವರು ಅಂತರ್ಜಾಲದ ಮುಖಾಂತರ ಮಂಗಳೂರು ಕ್ರಿಕೆಟ್ ಕ್ಲಬ್ ವೆಬ್ ಸೈಟ್ http://www.mccabudhabi.com  ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿ ಎಂಸಿಸಿ ಅಧ್ಯಕ್ಷ ಕೆ. ಹೆಚ್ ಲತೀಫ್ ಕಕ್ಕಿಂಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ. ಲತೀಫ್ 0506713247

Writer - ಯಾಹಯ್ಯಾ ಅಬ್ಬಾಸ್

contributor

Editor - ಯಾಹಯ್ಯಾ ಅಬ್ಬಾಸ್

contributor

Similar News