ಮಕ್ಕಾ: ಕೆಸಿಎಫ್‌ನಿಂದ ರಕ್ತದಾನ ಶಿಬಿರ

Update: 2017-02-17 09:56 GMT

 ಸೌದಿ ಅರೇಬಿಯಾ, ಫೆ.17: ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ‘ಕೆ.ಸಿ.ಎಫ್ ಡೇ’ ಪ್ರಯುಕ್ತ ಕೆಸಿಎಫ್ ಮಕ್ಕತುಲ್ ಮುಕರ್ರಮ್ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರವು ಮಕ್ಕಾದ ಕಿಂಗ್ ಅಬ್ದುಲ್ ಅಝೀಝ್ ಹಾಸ್ಪಿಟಲ್ ಝಾಹಿರ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸ್ವತಃ ರಕ್ತ ತಪಾಸಣೆ ಮಾಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಈ ಪವಿತ್ರ ಭೂಮಿಯಲ್ಲಿ ಉದ್ಯೋಗ ಮಾಡಲು ದೊರಕಿದ ಸದಾವಕಾಶವನ್ನು ಬಳಸಿ ಕೆಸಿಎಫ್ ಎಂಬ ಸಂಘಟನೆ ಕಟ್ಟಿಕೊಂಡು ಅತ್ಯಂತ ಮಹತ್ವ ಪೂರ್ಣವಾದ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಬಳಿಕ ದಾರುಲ್ ಉಲೂಮ್ ರಹ್ಮಾನಿಯ ದಾವಣಗೆರೆ ಇದರ ಪ್ರಾಂಶುಪಾಲ ಬಿ.ಎ. ಇಬ್ರಾಹೀಂ ಸಖಾಫಿ ದಾವಣಗೆರೆ ಮಾತಾಡಿ, ಕೆಸಿಎಫ್ ಕಾರ್ಯವೈಖರಿಯನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಕೆಸಿಎಫ್ ಮಕ್ಕಾ ಸೆಕ್ಟರಿನ 20 ಕಾರ್ಯಕರ್ತರು ರಕ್ತದಾನ ಮಾಡಿದರು.
ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು, ಶಿಕ್ಷಣ ವಿಭಾಗ ಕನ್ವೀನರ್ ಮುಶ್ತಾಕ್ ಸಾಗರ, ಸಾಂತ್ವನ ವಿಭಾಗ ಕನ್ವೀನರ್‌ಮೂಸಾ ಹಾಜಿ ಕಿನ್ಯ, ಕೆ.ಸಿ.ಎಫ್. ಜಿದ್ದಾ ಝೋನ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಬ್ರಾಹೀಂ ಕಿನ್ಯ ಹಾಗೂ ಕೆ.ಸಿ.ಎಫ್. ಸದಸ್ಯರು ಉಪಸ್ಥಿತರಿದ್ದರು.
ಕೆ.ಸಿ.ಎಫ್. ಮಕ್ಕತುಲ್ ಮುಕರ್ರಮ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿ, ವಂದಿಸಿದರು.

Writer - ವರದಿ: ಹಕೀಂ ಬೋಳಾರ್

contributor

Editor - ವರದಿ: ಹಕೀಂ ಬೋಳಾರ್

contributor

Similar News