ರಿಯಾದ್‌ನಲ್ಲಿ ಭಾರೀ ಮಳೆ : ಸಂಚಾರ ಅಸ್ತವ್ಯಸ್ತ

Update: 2017-02-17 15:55 GMT

ರಿಯಾದ್, ಫೆ. 17: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಗುರುವಾರ ಭಾರೀ ಮಳೆ ಸುರಿದಿದ್ದು, ನಗರದ ಹೆಚ್ಚಿನ ಭಾಗಗಳಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೂ ಅದೇ ವೇಳೆ, ವಾತಾವರಣದ ಉಷ್ಣತೆ ತಗ್ಗಿದೆ.

ಖುರಾಯಿಸ್ ರಸ್ತೆ ಮತ್ತು ಕಿಂಗ್ ಫಾಹದ್ ರಸ್ತೆಗಳಲ್ಲಿ ಸಂಚಾರದಲ್ಲಿ ಭಾರೀ ವ್ಯತ್ಯಯವುಂಟಾಯಿತು.

ನಿರಂತರ ಮಳೆಯಿಂದಾಗಿ ರಾಜಧಾನಿ ವಲಯ ಶೀತದ ತೆಕ್ಕೆಗೆ ಹೊರಳಿದೆ. ವಾರದ ಆರಂಭದಲ್ಲಿ ಇದ್ದ ಸಾಮಾನ್ಯ ಬೆಚ್ಚಗಿನ ವಾತಾವರಣ ಈಗ ಶೀತಕ್ಕೆ ಕಾಲಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News