ಸೌದಿ : 18 ಶಂಕಿತ ಉಗ್ರರ ಬಂಧನ

Update: 2017-02-17 16:00 GMT

ಜಿದ್ದಾ, ಫೆ. 17: ಸೌದಿ ಅರೇಬಿಯದ ಭದ್ರತಾ ಪಡೆಗಳು ಜಿದ್ದಾ, ಮಕ್ಕಾ, ರಿಯಾದ್ ಮತ್ತು ಕಾಸಿಮ್‌ಗಳಲ್ಲಿ ನಾಲ್ಕು ಭಯೋತ್ಪಾದನಾ ಜಾಲಗಳನ್ನು ಧ್ವಂಸಗೊಳಿಸಿವೆ ಹಾಗೂ 18 ಶಂಕಿತ ಭಯೋತ್ಪಾದಕರನ್ನು ಬಂಧಿಸಿವೆ.

ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಹಾಳುಗೆಡಹುವ ಉದ್ದೇಶದ ಭಯೋತ್ಪಾದನಾ ದಾಳಿಗಳನ್ನು ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೌದಿ ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್-ತುರ್ಕಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News