ಅಬುಧಾಬಿಯಲ್ಲಿ ಬೆಂಕಿ ಆಕಸ್ಮಿಕ

Update: 2017-02-19 10:01 GMT

ಅಬುಧಾಬಿ, ಫೆ. 19: ಅಬುಧಾಬಿ ವಿಮಾನ ನಿಲ್ದಾಣ ರಸ್ತೆಯ ಅಕ್ಕಾಯಿ ಕಟ್ಟಡದ ಎದುರುಭಾಗದ ಕಟ್ಟಡವೊಂದು ಬೆಂಕಿಗಾಹುತಿಯಾಗಿದೆ. ಮುಸಾಫದಿಂದ ಅಬುಧಾಬಿಗೆ ಬರುವ ರಸ್ತೆಯ ಅಡ್ನಾಕ್ ಸ್ಟೇಶನ್‌ನ ಸಮೀಪದ ಕಟ್ಟಡದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಇದು ಸಮೀಪದ ಇನ್ನೆರಡು ಕಟ್ಟಡಗಳಿಗೆ ಹರಡಿಕೊಂಡಿತು. ಕೆಳಭಾಗದಲ್ಲಿರುವ ಹೊಟೇಲ್‌ನ ಹೊಗೆಕೊಳವೆಯಿಂದ ಬೆಂಕಿ ಹೊರಬಂದಿದ್ದು ಬೆಂಕಿ ಅನಾಹುತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ರಾತ್ರಿ 10:15ಕ್ಕೆ ಬೆಂಕಿ ಉರಿಯತೊಡಗಿತ್ತು. ಅಬೂಧಾಬಿ ಮತ್ತು ಮುಸಾಫದಿಂದ ಬಂದ ಸಿವಿಲ್ ಡಿಫೆನ್ಸ್ ತಂಡಗಳು ಎರಡು ಗಂಟೆಕಾಲ ಹೋರಾಡಿ ಮಧ್ಯರಾತ್ರಿ ವೇಳೆಗೆ ಬೆಂಕಿಯನ್ನು ನಿಯಂತ್ರಿಸಿದೆ. ಗಾಳಿ ಬೀಸುತ್ತಿದ್ದುದರಿಂದ ಬೆಂಕಿಯನ್ನು ನಂದಿಸುವ ಕೆಲಸ ಕಠಿಣವಾಗಿತ್ತು.

 12 ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯದಲ್ಲಿ ವ್ಯಸ್ತವಾಗಿದ್ದವು. ಮೇಲ್ಭಾಗದ ಮನೆಗಳ ಕಡೆಗೆಬೆಂಕಿ ಹಬ್ಬಿದ ಹಿನ್ನೆಲೆಯಲ್ಲಿ ಅಲ್ಲಿದ್ದ ಜನರನ್ನು ಸಿವಿಲ್ ಭದ್ರತಾ ಅಧಿಕಾರಿಗಳು ತೆರವುಗೊಳಿಸಿದರು. ರವಿವಾರ ಶಾಲೆ ರಜೆ ಇದ್ದುದರಿಂದ ಮನೆಗಳಲ್ಲಿದ್ದ ಹೆಚ್ಚಿನ ಮಕ್ಕಳು ಬೇಗನೆ ಮಲಗಿ ನಿದ್ರಿಸಿದ್ದರು. ಇವರನ್ನೆಬ್ಬಿಸಬೇಕಾಗಿ ಬಂದದ್ದರಿಂದ ತೆರವು ಕಾರ್ಯ ಸ್ವಲ್ಪ ವಿಳಂಬವಾಗಿ ನಡೆದಿದೆ. ಎರಡೂ ಕಡೆಯ ರಸ್ತೆಗಳನ್ನು ಮುಚ್ಚಿ ಸಿವಿಲ್ ಭದ್ರತಾ ಪರಿಹಾರ ಕಾರ್ಯ ನಡೆಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News