ಬಹರೈನ್ ಐಎಫ್‌ಎಫ್‌ನಿಂದ ಏಕತಾ ದಿನಾಚರಣೆ

Update: 2017-02-20 10:26 GMT

ಬಹರೈನ್, ಫೆ.20: ಬಹರೈನ್ ಇಂಡಿಯಾ ಫ್ರಟರ್ನಿಟಿ ಫೋರಂ(ಐಎಫ್‌ಎಫ್)ನ ಕರ್ನಾಟಕ ಘಟಕದ ವತಿಯಿಂದ ಏಕತಾ ದಿನಾಚರಣೆ ಕಾರ್ಯಕ್ರಮವು ಶುಕ್ರವಾರ ಸಂಜೆ ಇಲ್ಲಿನ ಉಮ್ಮುಲ್ ಹಸಮ್ನಲ್ಲಿರುವ ಬ್ಯಾಂಕಾಂಕ್ ಆಡಿಟೋರಿಯಂನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಬಹರೈನ್ ಇಂಡಿಯಾ ಫ್ರಟರ್ನಿಟಿ ಫೋರಂನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯಹ್ಯಾ, ಮುಖ್ಯ ಭಾಷಣಕಾರರಾಗಿ ಬಹರೈನ್ ಕಿಂಗ್ಡಮ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಬೀಬುರಹ್ಮಾನ್‌ ಭಾಗವಹಿಸಿದ್ದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಹರೈನ್ ಇಂಡಿಯಾ ಫ್ರಟರ್ನಿಟಿ ಫೋರಂನ ಕರ್ನಾಟಕದ ಘಟಕದ ಅಧ್ಯಕ್ಷ ಮುಹಮ್ಮದ್ ಇರ್ಶಾದ್ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘಟನೆಯ ಕಾರ್ಯ ವೈಖರಿಯ ಬಗ್ಗೆ ಬಹರೈನ್ ಇಂಡಿಯಾ ಫ್ರಟರ್ನಿಟಿ ಫೋರಂನ ಕರ್ನಾಟಕದ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಥಾವುಲ್ಲ ಸುಳ್ಯ ಸಂಕ್ಷಿಪ್ತ ವಿವರ ನೀಡಿದರು.

ಸೆಮಿನಾರ್ ಮತ್ತು ಚಟುವಟಿಕೆಯನ್ನು ಸಿದ್ದೀಕ್ ಮಂಜೇಶ್ವರ ನಿರ್ವಹಿಸಿದರು. ಆಸಿಫ್ ನಂದರಬೆಟ್ಟು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News