ಕುವೈಟ್‌ : ಸ್ವದೇಶಿ ಮೀಸಲಾತಿ ಕಾನೂನು - ಸಣ್ಣ, ಮಧ್ಯಮ ಸಂಸ್ಥೆಗಳಿಗೆ ವಿನಾಯಿತಿ

Update: 2017-02-21 11:01 GMT

 ಕುವೈಟ್‌ಸಿಟಿ,ಫೆ.21: ಸ್ವದೇಶಿ ಮೀಸಲಾತಿ ಕಾನೂನಿಂದ ಸಣ್ಣ, ಮಧ್ಯಮ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಕುವೈಟ್ ಕಾರ್ಮಿಕ ಸಚಿವೆ ಹಿಂದ್ ಅಸ್ಸಬಾಹ್ ಹೇಳಿದ್ದಾರೆ. ಇಂತಹ ಸಂಸ್ಥೆಗಳ ಎಲ್ಲ ಕೆಲಸಗಳಿಗೂ ವಿದೇಶಿಯರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗುವುದು. ಹೊಸ ಸಂಸ್ಥೆಗಳಿಗೆ ಸರಕಾರ ಎಲ್ಲ ರೀತಿಯ ನೆರವನ್ನೂ ನೀಡುವುದು ಎಂದು ಸಚಿವೆ ತಿಳಿಸಿದ್ದಾರೆ.

25ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಖಾಸಗಿ ಸಂಸ್ಥೆಗಳಲ್ಲಿ ನಿಗದಿತ ಶೇಕಡವಾರು ಪ್ರಕಾರ ಸ್ವದೇಶಿ ಉದ್ಯೋಗಿಗಳನ್ನು ನೇಮಿಸುವುದು ಹೊಸಕಾನೂನು ಆಗಿದೆ.

ಮೀಸಲಾತಿಯನ್ನು ಪಾಲಿಸದ ಕಂಪೆನಿಗಳ ವ್ಯವಹಾರಕ್ಕೆ ತಡೆಯೊಡ್ಡುವುದು, ದಂಡ ವಿಧಿಸುವುದು ಹೊಸ ಕಾನೂನಿನಂತೆ ಅವಕಾಶ ವಿದೆ. ಕಳೆದ ದಿವಸ ಕಾರ್ಮಿಕ ಸಚಿವೆ ಹಿಂದ್ ಅಸ್ಸಬಾಹ್ ಹೊಸ ಅದೇಶ ಹೊರಡಿಸಿ ಈ ಕಾನೂನು ಮಿತಿಯಿಂದ ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ವಿನಾಯತಿ ಘೋಷಿಸಿದ್ದಾರೆ. ಆದ್ದರಿಂದ ಇಂತಹ ಸಂಸ್ಥೆಗಳಲ್ಲಿ ಎಲ್ಲ ಕೆಲಸಗಳಿಗೆ ವಿದೇಶಿಯರನ್ನು ನೇಮಕಗೊಳಿಸಬಹುದಾಗಿದೆ. ಯುವಕರನ್ನು ಹೆಚ್ಚು ಹೆಚ್ಚು ಉದ್ಯಮರಂಗಕ್ಕೆ ಕರೆತರುವ ನಿಟ್ಟಿನಲ್ಲಿ ಸ್ವದೇಶಿ ಮೀಸಲಾತಿ ಕಾನೂನನ್ನು ಜಾರಿಗೆ ತರಲಾಗಿದೆ. ಇದರಿಂದ ಈಗ ಸಣ್ಣ ಮತ್ತು ಮಧ್ಯಮ ಸಂಸ್ಥೆಗಳನ್ನು ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News