ಬಹರೈನ್: ಭಾರತೀಯ ವ್ಯಕ್ತಿ ನಿಧನ

Update: 2017-02-21 10:30 GMT

ಮನಾಮ,ಫೆ. 21: ಬಹರೈನ್‌ನಲ್ಲಿ ಉದ್ಯೋಗದಲ್ಲಿರುವ ತೃಶೂರಿನ ಕುಂಞಿಮೋನು ಶಿನೋಯ್(45) ನಿಧನರಾಗಿದ್ದಾರೆ. ನಿನ್ನೆ ಬೆಳಗ್ಗೆ ಹೃದಯಾಘಾತದಿಂದ ಅವರು ಮೃತಪಟ್ಟರು. ಎರಡು ತಿಂಗಳ ರಜೆಯಲ್ಲಿ ಊರಿಗೆ ಹೋಗಿ ಫೆಬ್ರವರಿ ಏಳಕ್ಕೆ ಇವರು ಮರಳಿ ಬಂದಿದ್ದರು. ಇವರು ಕಳೆದ 20ವರ್ಷಗಳಿಂದ ಬಹರೈನ್‌ನಲ್ಲಿ ದುಡಿಯುತ್ತಿದ್ದಾರೆ. ಮಾಲ್ಕಿಯ ಎನ್ನುವಲ್ಲಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದರು.

ನಿನ್ನೆ ಬೆಳಗ್ಗೆ 4:20ಕ್ಕೆ ಅಸೌಖ್ಯ ಕಾಣಿಸಿಕೊಂಡಿತ್ತು. ಅವರ ಜೊತಿಗಿದ್ದವರು ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಅವರು ಅಷ್ಟರಲ್ಲಿ ಮೃತಪಟ್ಟಿದ್ದರು. ಮೃತದೇಹವನ್ನು ಸಲ್ಮಾನಿಯ ವೈದ್ಯಕೀಯ ಕಾಂಪ್ಲೆಕ್ಸ್ ಶವಾಗಾರದಲ್ಲಿ ಇರಿಸಲಾಗಿದೆ. ಮೃತದೇಹವನ್ನು ಊರಿಗೆ ಕೊಂಡುಹೋಗಲು ಆವಶ್ಯಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News