ಸೌದಿ ಅರೇಬಿಯ: ಕೆಲಸದ ಸ್ಥಳದಲ್ಲಿ ಕುಸಿದು ಬಿದ್ದು ಭಾರತೀಯ ವ್ಯಕ್ತಿ ನಿಧನ

Update: 2017-02-24 07:05 GMT

ರಿಯಾದ್, ಫೆ. 24: ಕೆಲಸದ ಸ್ಥಳದಲ್ಲಿ ಕುಸಿದು ಬಿದ್ದು ಮಲಪ್ಪುರಂ ತಿರೂರಿನ ಚೆಂಬ್ರದ ಶಂಸುದ್ದೀನ್(44) ನಿಧನರಾಗಿದ್ದಾರೆ. ಅವರು ಬತ್ಹಾದ ಲಾವಣ್ಯ ರೆಸ್ಟೋರೆಂಟ್‌ನ ಉದ್ಯೋಗಿಯಾಗಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆ ಪ್ರಜ್ಞೆ ಕಳಕೊಂಡು ಕುಸಿದು ಬಿದ್ದಿದ್ದರು. ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಅಷ್ಟರಲ್ಲಿ ಅವರು ನಿಧನರಾಗಿದ್ದರು. ಮಂಗಳವಾರ ಬೆಳಗ್ಗೆ 7:30ಕ್ಕೆ ಘಟನೆ ನಡೆದಿದೆ. ಮೃತದೇಹವನ್ನು ಶುಮೈಶಿ

ಆಸ್ಪತ್ರೆಯಶವಾಗಾರದಲ್ಲಿಇರಿಸಲಾಗಿದೆ. ಕಳೆದ 22ವರ್ಷಗಳಿಂದ ಅವರು ರಿಯಾದ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹವನ್ನು ಊರಿಗೆ ಕೊಂಡು ಹೋಗಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News