ಕೆಸಿಎಫ್ ಅಲ್ ಖರ್ಜ್ ಸೆಕ್ಟರ್ ಅಸ್ತಿತ್ವಕ್ಕೆ

Update: 2017-02-25 08:13 GMT

ರಿಯಾದ್, ಫೆ.25: ಕೆಸಿಎಫ್ ರಿಯಾದ್ ಝೋನಲ್ ಅಧೀನದಲ್ಲಿ 17ನೆ ಸೆಕ್ಟರ್ ಆಗಿ ಅಲ್ ಖರ್ಜ್ ಸೆಕ್ಟರ್ ರೂಪೀಕರಣವು ಇತ್ತೀಚೆಗೆ ಅಲ್ ಖರ್ಜ್‌ನ ಮಸ್ನಹ್ ಮಲಾಬಿಸ್ ಸಮೀಪದ ವಸತಿಗೃಹವೊಂದರಲ್ಲಿ ನಡೆಯಿತು.

ಕೆಸಿಎಫ್ ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ ಸಭೆಯನ್ನು ಉದ್ಘಾಟಿಸಿದರು. ಕೆಸಿಎಫ್ ಸೌದಿ ರಾಷ್ಟೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಿಯಾದ್ ಸಂಘಟನಾ ಸಮಿತಿಯ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ, ಕೆಸಿಎಫ್ ರಿಯಾದ್ ಘಟಕದ ಪ್ರಧಾನ ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ಮಾತನಾಡಿದರು.

ನೂತನ ಸಮಿತಿ ರಚನೆಯ ನೇತೃತ್ವವನ್ನು ಯೂಸುಫ್ ಸಖಾಫಿ ಬೈತಾರ್ ವಹಿಸಿದ್ದರು.

ನೂತನ ಸಮಿತಿಯ ಅಧ್ಯಕ್ಷ: ಬಶೀರ್ ಕೃಷ್ಣಾಪುರ

ಪ್ರಧಾನ ಕಾರ್ಯದರ್ಶಿ: ಮುಜೀಬ್ ಕಂಬಳಬೆಟ್ಟು

ಕೋಶಾಧಿಕಾರಿ: ಅಬ್ಬಾಸ್ ವಿಟ್ಲ

ಸಂಘಟನಾ ವಿಭಾಗದ ಅಧ್ಯಕ್ಷ: ಯೂಸುಫ್ ಸೇರಾಜೆ

ಸಂಘಟನಾ ವಿಭಾಗದ ಕನ್ವೀನರ್: ಝಕರಿಯಾ ಟಿ.

ಎಜ್ಯುಕೇಶನಲ್ ವಿಂಗ್ ಅಧ್ಯಕ್ಷ: ಸತ್ತಾರ್ ಉಸ್ತಾದ್, ವಿಟ್ಲ

ಎಜ್ಯುಕೇಶನಲ್ ವಿಂಗ್ ಕನ್ವೀನರ್: ಮುನೀರ್ ಕೃಷ್ಣಾಪುರ

ರಿಲೀಫ್ ವಿಂಗ್ ಅಧ್ಯಕ್ಷ: ಮನ್ಸೂರ್ ಕೃಷ್ಣಾಪುರ

ರಿಲೀಫ್ ವಿಂಗ್ ಕನ್ವೀನರ್: ಶಮೀಮ್, ತಲಪಾಡಿ

ಸಾರ್ವಜನಿಕ ಸಂಪರ್ಕ ವಿಭಾಗದ ಅಧ್ಯಕ್ಷ: ಖಾದರ್ ಕೃಷ್ಣಾಪುರ

ಸಾರ್ವಜನಿಕ ಸಂಪರ್ಕ ವಿಭಾಗದ ಕನ್ವೀನರ್: ನಝೀರ್ ಕೃಷ್ಣಾಪುರ

ಇಬ್ರಾಹೀಂ ಕೃಷ್ಣಾಪುರ ಕಿರಾಅತ್ ಪಠಿಸಿದರು. ಕೆಸಿಎಫ್ ರಿಯಾದ್ ರೆನಲ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಜೀಬ್ ಕಂಬಳಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News