ಹಜ್‌ಗೆ ಸಂಬಂಧಿಸಿದ ಚರ್ಚೆಗೆ ಸೌದಿಗೆ ಭೇಟಿ ನೀಡಿದ ಇರಾನಿನ ಪ್ರತಿನಿಧಿಗಳ ತಂಡ

Update: 2017-02-25 11:13 GMT

ಜಿದ್ದಾ, ಫೆ. 25: ಈ ವರ್ಷದ ಹಜ್‌ನಲ್ಲಿ ಇರಾನ್‌ನಿಂದ ಯಾತ್ರಾರ್ಥಿಗಳು ಭಾಗವಹಿಸುವ ಕುರಿತು ಚರ್ಚಿಸಲಿಕ್ಕಾಗಿ ಇರಾನ್‌ನ ಪ್ರತಿನಿಧಿಗಳ ನಿಯೋಗ ಜಿದ್ದಾಕ್ಕೆ ಬಂದಿದೆ. ಹಜ್ ವಿಷಯಗಳ ಸಚಿವ ಮುಹಮ್ಮದ್ ಬೆಂತಿನ್‌ರೊಂದಿಗೆ ಡಾ. ಹಾಮಿದ್ ಮುಹಮ್ಮದ್‌ರ ನೇತೃತ್ವದ ಇರಾನ್ ಪ್ರತಿನಿಧಿ ತಂಡ ಚರ್ಚೆ ನಡೆಸಿತು. ಯಾತ್ರಾರ್ಥಿಗಳ ವಾಸ ಮತ್ತಿತರ ಸೌಕರ್ಯಗಳಿಗೆ ಸಂಬಂಧಿಸಿ ವಿವಿಧ ದೇಶಗಳ ಪ್ರತಿನಿಧಿಗಳೊಂದಿಗೆ ಹಜ್ ಸಚಿವಾಲಯ ನಡೆಸುವ ಚರ್ಚೆಯ ಭಾಗವಾಗಿ ಇರಾನ್‌ನ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಕಳೆದ ವರ್ಷದ ಹಜ್‌ನಲ್ಲಿ ಇರಾನ್‌ನ ತೀರ್ಥಯಾತ್ರಿಕರು ಭಾಗವಹಿಸಿರಲಿಲ್ಲ. ಸೌದಿ ಅರೇಬಿಯದೊಂದಿಗೆ ಹಜ್ ಒಪ್ಪಂದಕ್ಕೆ ಸಹಿಹಾಕಲು ಇರಾನ್ ನಿರಾಕರಿಸಿದ್ದರಿಂದ ಹೀಗಾಗಿತ್ತು. ಎಲ್ಲರಿಗೂ ಮಾಡುವ ವ್ಯವಸ್ಥೆಗಿಂತ ಭಿನ್ನವಾದ ಸೌಕರ್ಯಗಳನ್ನು ತಮಗೆ ನೀಡಬೇಕೆಂದು ಇರಾನ್ ಹಟಹಿಡಿದಿತ್ತು. ಆದ್ದರಿಂದ ಉಭಯ ದೇಶಗಳ ನಡುವೆ ಹಜ್ ಒಪ್ಪಂದಕ್ಕೆ ಸಹಿಹಾಕಲು ಸಾಧ್ಯವಾಗಿರಲಿಲ್ಲ.ಹಲವು ಬಾರಿ ಸೌದಿ ಅರೇಬಿಯ ಚರ್ಚೆಗೆ ಅವಕಾಶ ನೀಡಿದ್ದರೂ ಎಲ್ಲ ಚರ್ಚೆಗಳು ಅಂತಿಮವಾಗಿ ಫಲಪ್ರದವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News