ಜಿದ್ದಾ: ಎನ್‌ಆರ್‌ಐ ಸ್ಪೋರ್ಟ್ಸ್ ಕಬಡ್ಡಿ ಲೀಗ್ ಜರ್ಸಿ ಬಿಡುಗಡೆ

Update: 2017-02-25 11:42 GMT

ಜಿದ್ದಾ, ಫೆ.25: ಸಾಕೊ (SACQO) ಹಾಗೂ ಭಟ್ಕಳ ಕಮ್ಯುನಿಟಿ ಸಹಯೋಗದೊಂದಿಗೆ ಎಕ್ಸ್‌ಪರ್ಟೈಸ್ ಪ್ರಾಯೋಜಕತ್ವದಲ್ಲಿ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಮಾರ್ಚ್ 10ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಸಲಿರುವ 'ಕಬಡ್ಡಿ ಲೀಗ್- 2017' ಇದರ ಭಾಗವಾಗಿ ಜರ್ಸಿ ಹಾಗೂ ಟ್ರೋಫಿ ಬಿಡುಗಡೆ ಸಮಾರಂಭವು ಫೆಬ್ರವರಿ 24ರಂದು ಜಿದ್ದಾದ ಇಂಫಾಲಾ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದಲ್ಲಿ ಸಾಕೊ, ಭಟ್ಕಳ ಕಮ್ಯುನಿಟಿ, ವೈಟ್ ಸ್ಟೋನ್, ಎನರ್ಜ್ಯ ಅಲ್ ಫಾರಿಸ್, ಅಲ್ ಮುಝೈನ್, ಕರಾವಳಿ ವೆಲ್ಫೇರ್ ಅಸೋಸಿಯೇಶನ್ ರಿಯಾದ್ (KWAR), ಮಂಕಿ ಕಮ್ಯುನಿಟಿ ಜಿದ್ದಾ ಹಾಗೂ ಜಿದ್ದಾ ತಮಿಳು ತಂಡರ್ಸ್‌ ತಂಡಗಳ ನಾಯಕರು ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಆರ್‌ಐ ಸ್ಪೋಟ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಕಲ್ಲಡ್ಕ, ಅನಿವಾಸಿ ಭಾರತೀಯರ ಮಧ್ಯೆ ಭಾರತೀಯ ಗ್ರಾಮೀಣ ಕ್ರೀಡೆಗಳನ್ನು ಪ್ರಚುರಪಡಿಸುವುದು ಮತ್ತು ಅನಿವಾಸಿ ಭಾರತೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸುವುದು ಫೆಡರೇಶನ್‌ನ ಪ್ರಮುಖ ಉದ್ದೇಶ ಎಂದರು.

ತಮಿಳು ತಂಡರ್ಸ್‌ನ ವ್ಯವಸ್ಥಪಾಕ ಮಲ್ಲಪ್ಪನ್ ಮತ್ತು ಭಟ್ಕಳ್ ಕಮ್ಯುನಿಟಿ ಜಿದ್ದಾ ತಂಡದ ವ್ಯವಸ್ಥಾಪಕ ಫೈಝಲ್ ದಾಮೋದಿ ಟ್ರೋಫಿ ಅನಾವರಣಗೊಳಿಸಿದರು.

ನಂತರ ಲೀಗ್‌ಗಾಗಿ ಲಾಟ್ಸ್ ಎತ್ತುವ ಮೂಲಕ ತಂಡಗಳನ್ನು ಎ, ಬಿ, ಸಿ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು.

ಕಾರ್ಯಕ್ರಮ ನಿರೂಪಕ ಮುಹಮ್ಮದ್ ಅಲಿ ಕಬಡ್ಡಿ ಲೀಗ್‌ನ ನಿಯಮ ಮತ್ತು ನಿಬಂಧನೆಗಳನ್ನು ವಿವರಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News