ಜಾತ್ಯತೀತತೆ ಭಾರತದ ತಳಹದಿ: ಶಾಫಿ ಬೆಳ್ಳಾರೆ

Update: 2017-02-25 13:17 GMT

ಕತಾರ್, ಫೆ.25: ಕತರ್ ಇಂಡಿಯಾ ಸೋಶಿಯಲ್ ಫೋರಂ ಕರ್ನಾಟಕ ಘಟಕದ ವತಿಯಿಂದ  ಫೆ.23ರಂದು ಗುರುವಾರ ರಾತ್ರಿ 8 ಗಂಟೆಗೆ ಮನ್ಸೂರದ ಫ್ರೆಟರ್ನಿಟಿ ಹಾಲ್ ನಲ್ಲಿ 'ಜಾತ್ಯತೀತ ಭಾರತ ಅಪಾಯದಲ್ಲಿ' ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಪಿಎಫ್ ಐ  ಕರ್ನಾಟಕ ರಾಜ್ಯ ಸಮೀತಿ ಸದಸ್ಯರು ಶಾಫಿ ಬೆಳ್ಳಾರೆ  ಮಾತನಾಡಿ, ಜಾತ್ಯತೀತತೆ ಭಾರತದ ತಳಹದಿ ಅದನ್ನು ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು. ದೇಶದಲ್ಲಿ ದಲಿತರು ಅಲ್ಪಸಂಖ್ಯಾತರ ಮೇಲೆ ದೌರ್ಜ್ಯನ್ಯಗಳು ಮಿತಿಮೀರುತಿದೆ. ದೇಶವನ್ನು ಅಳುತಿರುವ ಆಡಳಿತ ಪಕ್ಷಗಳು ಅದನ್ನು ಕಂಡು ಕಾಣದಂತೆ ವರ್ತಿಸುತ್ತಿವೆ. ಶಾಸಕರು ಮತ್ತು ಸಂಸದರಿಂದಲೂ ಕೋಮುಭಾವನೆ ಕೆರಳಿಸುವಂತ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ನುಡಿದರು.

ಮುಸಲ್ಮಾನರ ಪರಿಸ್ಥಿತಿ ಈ ದೇಶದಲ್ಲಿ ಯಾವ ರೀತಿಯಲ್ಲಿದೆಂದರೆ  ಮನೆಯೊಳಗೆ ಅಡುಗೆ ಕೊನೆಯಲ್ಲಿ ಯಾವ ಪದಾರ್ಥವನ್ನು ಮಾಡಿದ್ದಾರೆ ಎಎಂದು ಕೆಲವರು ಬಂದು ತಮ್ಮ ಪಾತ್ರೆಗೆ ಕೈ ಹಾಕಿ ನೋಡುವಂತಾಗಿದೆ. ನಮ್ಮ ಮನೆಯಲ್ಲಿ ಏನನ್ನ ತಿನ್ನಬೇಕು ಕೆಲವೊಂದು ಶಕ್ತಿಗಳು ಇಲ್ಲಿ ತೀರ್ಮಾನಿಸುತ್ತಿವೆ ಎಂದು ಹೇಳಿದರು.

ಹರಿಯಾಣದಲ್ಲಿ ಬೀಫ್ ಬಿರಿಯಾನಿ ಮಾಡಿದ್ದಾರೆಂಬ ಕಾರಣಕ್ಕೆ ಮನೆಯಲ್ಲಿ ಇದ್ದ ವೃದ್ಧರನ್ನು ಎಳೆದು ತಂದು ಅವರ ಕೈಕಾಲುಗಳನ್ನು ಕಟ್ಟಿ ಅವರೆದುರಲ್ಲೇ ಅಪ್ರಾಪ್ತರಾದ ಅವರ ಎರಡು ಮಕ್ಕಳಾದ ಯುವತಿಯರ ಮೇಲೆ ಅತ್ಯಾಚಾರ ಮಾಡಿರುವುದು ಹೇಯನಿಯವಾದ ಕೃತ್ಯವಾಗಿದೆ ಎಂದು ಹೇಳಿದರು.

ಮುಷ್ಪರ್ ಅದ್ನನ್ ಅವರ ಕೀರತ್ ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸೋಶಿಯಲ್ ಫೋರಮ್ ನ ಕರ್ನಾಟಕ ಘಟಕದ ಅಧ್ಯಕ್ಷ ನಜೀರ್ ಫಾಷ ಪ್ರಾಸ್ತಾವಿಕ ಭಾಷಣ ಮಾಡಿದರು.

ವೇದಿಕೆಯಲ್ಲಿ ಖ್ಯಾತ ಉದ್ಯಮಿ ನಾಸಿರ್ ಮಂಜೇಶ್ವರ, ಹನನ್ ಕ್ರಿಕೆಟ್ ಕ್ಲಬ್ ಸ್ಥಾಪಕ ಖಾದರ್ ಬಂಟ್ವಾಳ, ಕತಾರ್  ಸೋಶಿಯಲ್ ಫೋರಮ್ ಅಧ್ಯಕ್ಷರು ಅಝೀಜ್ ಸುಬಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೋಚುಳ್ಳಿ ಫೋರಮ್ ನ ಸಾರ್ವಜನಿಕ ಸಂಪರ್ಕಾಧಿಕಾರಿ  ಲತೀಫ್ ಮಡಿಕೇರಿ ಧನ್ಯವಾದವನ್ನು ಸಲ್ಲಿಸಿದರು.

ಕಾರ್ಯಕ್ರಮವನ್ನು ಝಮೀರ್ ಕಾರ್ನಾಡ್ ನಿರ್ವಹಿಸಿದರು. ಕಾರ್ಯಕ್ರಮದ ಸಹಾಯಕರಾಗಿ ಯಾಹ್ಯಾ ಪುತ್ತೂರು ನಿರ್ವಹಿಸಿದರು.

Writer - ಖಲಂದರ್ ಶಾಫಿ ಜಾಲ್ಸುರು

contributor

Editor - ಖಲಂದರ್ ಶಾಫಿ ಜಾಲ್ಸುರು

contributor

Similar News