ಅಕ್ರಮವಾಗಿ ಮನೆಗೆಲಸದವರನ್ನು ನೇಮಿಸಿಕೊಳ್ಳಬೇಡಿ :ಸೌದಿ ಕುಟುಂಬಗಳಿಗೆ ಪೊಲೀಸರ ಎಚ್ಚರಿಕೆ

Update: 2017-02-25 14:46 GMT

ರಿಯಾದ್ (ಸೌದಿ ಅರೇಬಿಯ), ಫೆ. 25: 63 ಅಕ್ರಮ ಮನೆಗೆಲಸದವರನ್ನು ಬಂಧಿಸಿರುವ ಮದೀನಾ ಪೊಲೀಸರು, ಅಕ್ರಮ ಮಾರ್ಗಗಳ ಮೂಲಕ ಮನೆಗೆಲಸದವರನ್ನು ನೇಮಿಸದಂತೆ ಜನರಿಗೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಬಂಧಿತರಾದವರು ಆಫ್ರಿಕ ಮೂಲದ ಮಹಿಳಾ ಮತ್ತು ಪುರುಷ ಕೆಲಸಗಾರರು ಹಾಗೂ ಅವರು ಸೌದಿ ಮನೆಗಳಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದರು ಎಂದು ಮದೀನಾ ಪೊಲೀಸ್ ವಕ್ತಾರ ಮೇಜರ್ ಹುಸೈನ್ ಅಲ್-ಕಹ್ತಾನಿ ತಿಳಿಸಿದರು.

ಮದೀನಾ ಪೊಲೀಸರು ನಡೆಸಿದ ದಾಳಿಗಳ ವೇಳೆ ಬಂಧಿಸಲ್ಪಟ್ಟವರನ್ನು ಅಗತ್ಯ ಕ್ರಮಗಳಿಗಾಗಿ ಸೂಕ್ತ ಪ್ರಾಧಿಕಾರಗಳಿಗೆ ಹಸ್ತಾಂತರಿಸಲಾಗಿದೆ ಎಂದರು.

ನಿಮ್ಮ ಕುಟುಂಬ ಸದಸ್ಯರ ಆರೋಗ್ಯ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಂಥ ವ್ಯಕ್ತಿಗಳೊಂದಿಗೆ ವ್ಯವಹರಿಸಬೇಡಿ ಎಂದು ಮದೀನಾ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ ಹದಿ ಅಲ್-ಶಹ್ರಾನಿ ಜನರಿಗೆ ಸೂಚಿಸಿದರು.

‘‘ಬೇರೆ ಕಡೆಯಿಂದ ತಪ್ಪಿಸಿಕೊಂಡು ನಿಮ್ಮ ಮನೆಗಳಿಗೆ ಕೆಲಸ ಕೇಳಿಕೊಂಡು ಬಂದಿರುವ ಮನೆಗೆಲಸದವರನ್ನು ತೆಗೆದುಕೊಳ್ಳಬೇಡಿ’’ ಎಂದರು.

ಬಂಧಿಸಲ್ಪಟ್ಟವರಲ್ಲಿ ವಾಸ್ತವ್ಯ ಪರ್ಮಿಟ್‌ಗಳು ಇಲ್ಲ ಕೆಲಸಗಾರರು, ಸರಿಯಾದ ಕೆಲಸ ಇಲ್ಲದ ವ್ಯಕ್ತಿಗಳು, ಬೇರೆ ಬೇರೆ ಸ್ಪಾನ್ಸರ್‌ಗಳಿಗೆ ಕೆಲಸ ಮಾಡುವವರು, ತಮ್ಮ ಸ್ಪಾನ್ಸರ್‌ಗಳಿಂದ ತಪ್ಪಿಸಿಕೊಂಡು ಬಂದಿರುವ ಕೆಲಸಗಾರರು ಹಾಗೂ ಸಾರ್ವಜನಿಕ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟ ಮಾಡುವ ಅಕ್ರಮ ವ್ಯಾಪಾರಿಗಳು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News