ಕತರ್‌ನಲ್ಲಿ ಈವರ್ಷದ ಹಜ್ ನೋಂದಾವಣೆ ಬುಧವಾರದಿಂದ
ದೋಹ, ಫೆ. 26: ಈವರ್ಷದ(2017, ಹಿಜರಿ ವರ್ಷ:1438) ಹಜ್‌ಗೆ ಅರ್ಜಿ ಸ್ವೀಕಾರ ಮುಂದಿನ ಬುಧವಾರದಿಂದ ಆರಂಭವಾಗಲಿದೆ ಎಂದು ವಕ್ಫ್ ಇಸ್ಲಾಮಿಕ್ ವಿಷಯಗಳ ಸಚಿವಾಲಯ ತಿಳಿಸಿದೆ. ಮಾರ್ಚ್ ಒಂದರಿಂದ 30ರವರೆಗೆ ನೋಂದಾವಣೆ ಮಾಡಿಕೊಳ್ಳುವ ಅವಕಾಶವಿದೆ. ಸಚಿವಾಲಯದ www.hajj.gov.qa ವೆಬ್‌ಸೈಟ್ ಮೂಲಕ ದೇಶದಲ್ಲಿರುವ ಸ್ವದೇಶಿಯರಿಗೂ ವಿದೇಶಿಯರಿಗೂ ಈ ವರ್ಷದ ಹಜ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸ್ವದೇಶಿಯರು ಮತ್ತು ವಿದೇಶಿಯರು ಬಹುಸುಲಭದಲ್ಲಿ ಅರ್ಜಿಸಲ್ಲಿಸಲು ಸಾಧ್ಯವಾಗುವ ರೀತಿಯಲ್ಲಿ ಅರಬ್, ಇಂಗ್ಲಿಷ್‌ನಲ್ಲಿ ಫಾರ್ಮ್ ತಯಾರಿಸಲಾಗಿದೆಎಂದು ಸಚಿವಾಲಯದ ಹಜ್,ಉಮ್ರಾ ಇಲಾಖೆ ನಿರ್ದೇಶಕ ಅಲಿ ಸುಲ್ತಾನ್ ಅಲ್ ಮುಸೈಯಿಫಿರಿ ಹೇಳಿದ್ದಾರೆ. ಇದರೊಂದಿಗೆ ಅರ್ಜಿ ಸಲ್ಲಿಸುವವರ ಅರ್ಹತೆಯನ್ನು ಹಜ್ ಕಮಿಟಿ ಮುಂದಿಟ್ಟಿದೆ.
ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು. ಅವರ ಜೊತೆ ಇರುವವರಿಗೆ ಕನಿಷ್ಠ 16ವರ್ಷ ವಯಸ್ಸಾಗಿರಬೇಕು. ಅದೇವೇಳೆ ಕತರ್‌ನಲ್ಲಿ ವಾಸವಿರುವವರಿಗೆ ಕನಿಷ್ಠ 18ವರ್ಷ ಪೂರ್ತಿಯಾಗಿದ್ದು ಮತ್ತು ಮೂರುವರ್ಷಗಳಿಂದ ಅವರು ಕತರ್‌ನಲ್ಲಿ ವಾಸವಿದ್ದಿರಬೇಕು ಮತ್ತು ಕಳೆದ ಐದು ವರ್ಷ ಅವಧಿಯಲ್ಲಿ ಹಜ್ ನಿರ್ವಹಿಸದಿದ್ದವರು ಆಗಿರಬೇಕು ಎಂದು ಹಜ್ ಕಮಿಟಿ ನಿರ್ದೇಶಸಿದೆ. ಮರ್ಹಮಿಲ್ಲದೆ ಹಜ್‌ಗೆ ಹೋಗುವ ಮಹಿಳೆಯರಿಗೆ 45 ವರ್ಷ ಪೂರ್ತಿಯಾಗಿರಬೇಕು ಎನ್ನುವ ನಿಬಂಧನೆಯನ್ನು ಸಚಿವಾಲಯ ವಿಧಿಸಿದೆ ಎಂದು ವರದಿಯಾಗಿದೆ.