ಬಹರೈನ್‌ನಲ್ಲಿ ಭಾರತೀಯನ ನಿಗೂಢ ಸಾವು !
Update: 2017-02-27 15:00 IST
ಮನಾಮ, ಫೆ. 27: ಬಹರೈನ್‌ನಲ್ಲಿ ಕೇರಳದ ಯುವಕ ತಾನು ವಾಸಿಸುತ್ತಿದ್ದ ಸ್ಥಳದಲ್ಲಿ ಮೃತನಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೂಪರ್ ಮಾರ್ಕೆಟ್ ಒಂದರಲ್ಲಿ ಕೆಲಸಕ್ಕಿದ್ದ ಕೋಝಿಕ್ಕೋಡ್ ವಡಗರದ ರಾಜೇಶ್(39) ಮೃತರಾದ ವ್ಯಕ್ತಿಯಾಗಿದ್ದಾರೆ. ಶನಿವಾರ ಸಂಜೆ ಮೃತದೇಹ ಕಂಡುಬಂದಿದೆ.
ಊರಿಗೆ ರಜೆಯಲ್ಲಿ ತೆರಳಿ ಮದುವೆಯಾಗಿ ಎರಡು ವಾರಗಳ ಹಿಂದಷ್ಟೇ ಅವರು ಬಹರೈನ್‌ಗೆ ಮರಳಿದ್ದರು. ಸಲ್ಮಾನಿಯ ಆಸ್ಪತ್ರೆಯ ಶವಾಗಾರದಲ್ಲಿ ಅವರ ಮೃತದೇಹವನ್ನು ಇರಿಸಲಾಗಿದ್ದು, ಅಗತ್ಯ ಕ್ರಮಗಳ ನಂತರ ಊರಿಗೆಕೊಂಡು ಹೋಗಲಾಗುವುದು ಎಂದು ವರದಿ ತಿಳಿಸಿದೆ.