ಅಬುಧಾಬಿ: ನಾಪತ್ತೆಯಾಗಿರುವ ಪುತ್ರನ ನಿರೀಕ್ಷೆಯಲ್ಲಿ ಭಾರತದ ಬಡಕುಟುಂಬ

Update: 2017-02-28 12:01 GMT

ಅಬುಧಾಬಿ: ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನ ಸುಳಿವು ಲಭಿಸುವ ನಿರೀಕ್ಷೆಯಲ್ಲಿ ಕೇರಳದ ಕುಟುಂಬವೊಂದು ದಿನದೂಡುತ್ತಿದೆ. 31 ವರ್ಷ ಪ್ರಾಯದ ಓಲಪರಂಬಿಲ್ ಹಕೀಮ್ 2009ರಲ್ಲಿ ಊರಿಗೆ ಮರಳುವುದರ ಮಧ್ಯೆ ನಾಪತ್ತೆಯಾಗಿದ್ದು, ಇದುವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದುಕುಟುಂಬ ಸದಸ್ಯರು ತಿಳಿಸಿದ್ದಾರೆ.

ಊರಿಗೆ ಮರಳುವ ವೇಳೆ ಅವರುಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.ಕುಟುಂಬದ ಹಿರಿಯ ಮಗನಾದ ಹಕೀಂ ಪ್ರೌಢಶಾಲಾ ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಯುಎಇಯಲ್ಲಿ ಭಾರೀ ವಾಹನದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮರದ ಮಿಲ್‌ನಲ್ಲಿಟಿಂಬರ್‌ಕಟ್ಟರ್ ಆಗಿ ಕೆಲಸ ಮಾಡುತ್ತಿರುವತಂದೆ,ಗೃಹಿಣಿತಾಯಿ, ಸಹೋದರ ಹಾಗೂ ತಂಗಿಯನ್ನೊಳಗೊಂಡ ಕುಟುಂಬ ಇವರದ್ದು. ಜೀವನೋಪಾಯಕ್ಕಾಗಿದೇಶ ಬಿಟ್ಟುಕೊಲ್ಲಿರಾಷ್ಟ್ರಕ್ಕೆ ತೆರಳಿರುವ ಇವರ ಪತ್ತೆಇನ್ನೂಆಗದಿರುವುದುಕುಟುಂಬ ಸದಸ್ಯರನ್ನು ದಿಗಿಲು ಗೊಳಿಸಿದೆ.

 ಗೃಹ ಸಾಲವನ್ನು ಸಂದಾಯಗೊಳಿಸುವ ಏಕೈಕ ಉದ್ದೇಶವನ್ನಿಟ್ಟುಕೊಂಡು ನವೆಂಬರ್ 2008ರಲ್ಲಿ ಯುಎಇಗೆ ಆಗಮಿಸಿದ್ದ ಇವರು ದುಬೈಯ ಟೆಕ್ನಿಕಲ್‌ ಥರ್ಮಲ್ ಸಿಸ್ಟಮ್ಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಂದು ಲಕ್ಷರೂ. ಹಣವನ್ನು ಪಡೆದು ವೀಸಾ ನೀಡಿದ್ದ ಏಜೆಂಟ್‌ ತನಗೆ ಮೋಸ ಮಾಡಿದ್ದಾನೆ ಎಂಬ ವಿಚಾರ ಅವರಿಗೆ ದುಬೈಗೆ ತೆರಳಿದ ಬಳಿಕವಷ್ಟೇ ಗೊತ್ತಾಗಿತ್ತು. ವಾಗ್ದಾನ ಮಾಡಿದ್ದ ವೇತನಕ್ಕಿಂತ ಅತಿ ಕಡಿಮೆ ವೇತನವನ್ನುಇವರಿಗೆ ನೀಡಲಾಗುತ್ತಿತ್ತು.

ತನ್ನ ತುಚ್ಛ ಸಂಪಾದನೆಯು ಗೃಹ ಸಾಲ ಸಂದಾಯಕ್ಕೆ ಏನೇನು ಸಾಲದು ಎಂದು ಚಿಂತಿತನಾಗಿದ್ದ ಹಕೀಂ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ತಂಗಿ ತಿಳಿಸಿದ್ದಾರೆ. ಹಕೀಂ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಮನಗಂಡಿದ್ದ ಕಂಪೆನಿಯು ಅಬುದಾಬಿಯ ಇನ್ನೊಂದು ಕೈಗಾರಿಕಾ ನಗರದ ಕಾರ್ಮಿಕ ವಸತಿ ಗೃಹಕ್ಕೆ ಅವರನ್ನು ಸ್ಥಳಾಂತರಿಸಿತ್ತು ಹಾಗೂ ವಿರಾಮಕ್ಕೆ ಅನುಮತಿಸಿ ಕೆಲಸ ಮಾಡುವ ಸ್ಥಿತಿಯಲ್ಲಿ ಹಕೀಂ ಇಲ್ಲ ಎಂದು ತಿಳಿದ ಕಂಪೆನಿಯು ಬಳಿಕ ಅವರ ವೀಸಾವನ್ನು ರದ್ದುಗೊಳಿಸಿತ್ತು ಹಾಗೂ ಊರಿಗೆ ಕಳುಹಿಸಲು ವಿಮಾನದ ಟಿಕೆಟ್‌ನ ವ್ಯವಸ್ಥೆಯನ್ನೂ ಮಾಡಿತ್ತು.ಮನೆಗೆ ಕರೆ ಮಾಡಿ ತಾನು ಬರುವ ವಿಚಾರವನ್ನು ತಿಳಿಸಿದ್ದ ಹಕೀಮ್‌ರನ್ನು ಬರಮಾಡಿಕೊಳ್ಳಲು ಮನೆಯವರು ಟ್ಯಾಕ್ಸಿಯ ವ್ಯವಸ್ಥೆಯನ್ನೂ ಮಾಡಿದ್ದರು.ಅಬುದಾಬಿ ವಿಮಾನ ನಿಲ್ದಾಣಕ್ಕೆ ತೆರಳುವುದರ ಮಧ್ಯೆ ಹಕೀಂ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯು ಅದೇ ದಿನ ನಮಗೆ ಲಭಿಸಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಘಟನೆಯ ಸಂಬಂಧ ಹಕೀಂ ಕುಟುಂಬವು ದುಬೈಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿತ್ತು.ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆ ಭಾರತೀಯ ರಾಯಭಾರಿ ಕಚೇರಿಯು ಈ ಕುರಿತು ಚರ್ಚೆ ನಡೆಸಿತ್ತು.ಯುಎಇಯ ಅಧಿಕೃತ ದಾಖಲೆಗಳ ಪ್ರಕಾರ ಅವರು ಇನ್ನೂ ಯುಎಇಯಲ್ಲಿ ಇರುವ ಮಾಹಿತಿ ನಮಗೆ ಲಭ್ಯವಾಗಿರುವುದರಿಂದ ಅವರ ಪತ್ತೆಗಾಗಿ ನಾವಿನ್ನೂ ಕಾಯುತ್ತಿದ್ದೇವೆ ಎಂದು ಹಕೀಂ ಕುಟುಂಬ ತಿಳಿಸಿದೆ.

Writer - ವರದಿ :ಸಿರಾಜ್ ಅರಿಯಡ್ಕ

contributor

Editor - ವರದಿ :ಸಿರಾಜ್ ಅರಿಯಡ್ಕ

contributor

Similar News