ಒಂದು ಮಿಲಿಯನ್ ದಿರ್ಹಮ್ ಸಂಭಾವನೆಯ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ ದುಬೈ ದೊರೆ !

Update: 2017-02-28 13:52 GMT

ದುಬೈ, ಫೆ. 28: ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಮತ್ತು ದುಬೈಯ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಬಳಿ ಒಂದು ಹುದ್ದೆ ಖಾಲಿಯಿದೆ ಹಾಗೂ ಇದಕ್ಕೆ 10 ಲಕ್ಷ ದಿರ್ಹಮ್ (1.81 ಕೋಟಿ ರೂಪಾಯಿ) ಸಂಭಾವನೆಯ ಕೊಡುಗೆಯನ್ನು ಅವರು ನೀಡಿದ್ದಾರೆ!

ಈ ಹುದ್ದೆಗೆ ಅರಬ್ ದೇಶಗಳ ಎಲ್ಲ ಅರಬ್ಬರು ಅರ್ಹರು ಹಾಗೂ 5ರಿಂದ 95 ವರ್ಷದವರೆಗಿನ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.

ಈ ಕೊಡುಗೆಯನ್ನು ಅವರು ಟ್ವಿಟರ್‌ನಲ್ಲಿ ನೀಡಿದ್ದಾರೆ. ಅದರ ವಿವರ ಇಂತಿದೆ:

‘‘ಈ ಅರ್ಹತೆಗಳು, ಅನುಭವ ಮತ್ತು ಕೌಶಲ್ಯಗಳನ್ನು ಹೊಂದಿರುವವರಿಂದ ಅರ್ಜಿಗಳನ್ನು ನಾವು ಆಹ್ವಾನಿಸುತ್ತೇವೆ.

ಜನರೊಂದಿಗೆ ವ್ಯವಹರಿಸುವಲ್ಲಿ ನೈಪುಣ್ಯ ಹೊಂದಿದವರು ಮತ್ತು ಅನುಭವಸ್ಥರು.

ಜನರ ತೃಪ್ತಿ ಮತ್ತು ಸಂತೋಷವೇ ಗುರಿಯಾಗಿರುವ ಸಾಮಾಜಿಕ ಸೇವೆಯಲ್ಲಿ ಅಥವಾ ಮಾನವೀಯ ನೆರವು ಚಟುವಟಿಕೆಗಳಲ್ಲಿ ಒಮ್ಮೆಯಾದರೂ ಪಾಲ್ಗೊಂಡಿರುವ ಅನುಭವ ಹೊಂದಿದವರು.

ಸಮಾಜದಲ್ಲಿ ಉತ್ತಮ ನೈತಿಕತೆ ಮತ್ತು ಸ್ಥಾನಮಾನ ಹೊಂದಿರುವವರು.

ತನ್ನ ತಂಡದಲ್ಲಿ ಮತ್ತು ಅರಬ್ ದೇಶಗಳಲ್ಲಿರುವ ಜನರ ಸಾಮರ್ಥ್ಯಗಳಲ್ಲಿ ನಂಬಿಕೆ ಹೊಂದಿರುವವರು.

ಹಾಗೂ ಅರ್ಜಿ ಸಲ್ಲಿಸುವವರ ಪ್ರಾಯ 5ರಿಂದ 95 ವರ್ಷಗಳಾಗಿರಬೇಕು.

ಅರಬ್ ದೇಶಗಳಲ್ಲಿರುವ ಎಲ್ಲ ಅರಬ್ಬರಿಗೆ ಈ ಹುದ್ದೆ ಮುಕ್ತವಾಗಿದೆ.

ಇದಕ್ಕೆ 10 ಲಕ್ಷ ದಿರ್ಹಮ್ ಸಂಭಾವನೆ ನೀಡಲಾಗುವುದು.

ನಿಮ್ಮ ಪರವಾಗಿ ನೀವೇ ಅರ್ಜಿ ಸಲ್ಲಿಸಬಹುದು ಅಥವಾ ಇತರರು ನಿಮ್ಮ ಪರವಾಗಿ ಅರ್ಜಿ ಸಲ್ಲಿಸಬಹುದು. ಕಂಪೆನಿಗಳೂ ನಿಮ್ಮ ಪರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು www.arabhopemakers.comಗೆ ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News