ಸೌದಿಯಲ್ಲಿ ಸ್ವಂತ ಹೆಸರಲ್ಲಿ ಉದ್ಯಮ : ವಲಸಿಗರಿಗೆ ಶುಭ ಸುದ್ದಿ

Update: 2017-03-01 06:34 GMT

ರಿಯಾದ್,ಮಾ. 1: ಸೌದಿ ಅರೇಬಿಯದಲ್ಲಿ ವಿದೇಶಿಯರಿಗೆ ತಮ್ಮದೆ ಹೆಸರಲ್ಲಿ ವ್ಯಾಪಾರಿ ಸಂಸ್ಥೆಗಳನ್ನು ಆರಂಭಿಸಲು ನಾಲ್ಕುತಿಂಗಳೊಳಗೆ ಕಾನೂನು ತಿದ್ದುಪಡಿ ತರಲಾಗುವುದು ಎಂದು ವಾಣಿಜ್ಯಮತ್ತು ಹೂಡಿಕೆ ಸಚಿವ ಡಾ ಮಾಜಿದ್ ಅಲ್‌ಖಸಬಿ ತಿಳಿಸಿದ್ದಾರೆ.

ವಾಣಿಜ್ಯ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿ ವಿದೇಶಿಯರಿಗೆ ಸ್ವಂತ ಹೆಸರಲ್ಲಿ ಉದ್ಯಮ ಪ್ರಾರಂಭಿಸಲು ಕಾನೂನಿನಲ್ಲಿ ಅನುಮತಿ ನೀಡಲಾಗುವುದು. ಈಗ ನಡೆಯುತ್ತಿರುವ ಬೇನಾಮಿ ವ್ಯವಹಾರಗಳನ್ನು ಇಲ್ಲವಾಗಿಸುವ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ.

ನಿಗದಿ ಶುಲ್ಕ ತೆರಿಗೆ ವಿಧಿಸಿ ವಿದೇಶಿಯರಿಗೆ ಸಂಸ್ಥೆಗಳನ್ನು ನಡೆಸಲು ಅನುಮತಿ ನೀಡಲಾಗುವುದು ಎಂದು ವಾಣಿಜ್ಯ, ಹೂಡಿಕೆ ಸಚಿವರು ಹೇಳಿದರು.  ಎರಡನೆ ಹಂತವು ಕೊನೆಗೊಳ್ಳುವ ಮೊದಲು ತಿದ್ದುಪಡಿಯಾದ ಹೊಸ ಕಾನೂನು ಜಾರಿಗೆ ಬರಲಿದೆ.

ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಸಚಿವಾಲಯ ಅಧ್ಯಯನ ನಡೆಸಿದೆ. ಬೇನಾಮಿ ಸಂಸ್ಥೆಗಳ ಕೆಟ್ಟ ಪರಿಣಾಮ ಅಧ್ಯಯನದಲ್ಲಿ ಸ್ಪಷ್ಟವಾದದ್ದರಿಂದ ಹೊಸ ತೀರ್ಮಾನ ತಳೆಯಲಾಗಿದೆ ಎಂದು ಸಚಿವರು ಹೇಳಿದರು.

ಸೌದಿಯಲ್ಲಿ ಹೊಸದಾಗಿ ಆರಂಭಿಸುವ ಸಮಾನಾಂತರ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ವಿವರಿಸಲು ಕರೆದ ಸಭೆಯಲ್ಲಿ ಸಚಿವರು ಈವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಣ್ಣ, ಮಧ್ಯಮ ಸಂಸ್ಥೆಗಳನ್ನು ಆರಂಭಿಸಲು ವಿದೇಶಿಯರಿಗೆ ಅನುಮತಿ ನೀಡುವ ಮೂಲಕ ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಚಿಸಲಾಗಿದೆ.

ವಿದೇಶಿ ಹೂಡಿಕೆಯನ್ನು ದೇಶಕ್ಕೆ ಆಕರ್ಷಿಸಲು ಇದರಿಂದ ಸಾಧ್ಯವಾಗಲಿದೆ. ದಶಲಕ್ಷರಿಯಾಲ್ ಹೂಡಿಕೆ ಆವಶ್ಯಕವಾದ ಇನ್ವೆಸ್ಟ್‌ಮೆಂಟ್ ಲೈಸನ್ಸ್ ಹಾಗೂ ಸಣ್ಣ ಸಂಸ್ಥೆಗಳನ್ನು ಆರಂಭಿಸಲು ವಿದೇಶಿಯರಿಗೆ ಅನುಮತಿ ನೀಡುವುದರಿಂದ ಆರ್ಥಿಕ ಕ್ಷೇತ್ರದಲ್ಲಿ ಭಾರೀ ಪ್ರಗತಿ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News