ಬಹರೈನ್: 55 ಅನಧಿಕೃತ ಕಾರ್ಮಿಕರ ಬಂಧನ
Update: 2017-03-03 12:34 IST
ಮನಾಮ,ಮಾ,3: ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ನಡೆಸಿದ ತಪಾಸಣೆಗಳಲ್ಲಿ 55 ಮಂದಿ ಅನಧಿಕೃತವಾಗಿ ಬಹರೈನ್ ಗೆ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಸದರ್ನ್ ಗವರ್ನರೇಟ್ ಪೊಲೀಸ್ ಜನರಲ್ ಡೈರೆಕ್ಟರ್ ತಿಳಿಸಿದ್ದಾರೆ.
ಸ್ಕ್ರೊಪ್ಯಾರ್ಡ್ ಪ್ರದೇಶದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಸದರ್ನ ಗವರ್ನರೇಟ್, ಎನ್.ಪಿ. ಆರ್.ಎ. ಎಲ್.ಎಂ.ಆರ್.ಐ. ಸದರ್ನ್ ಮುನ್ಸಿಪಾಲಿಟಿ ಅಧಿಕಾರಿಗಳು ತಪಾಸಣೆಯ ನೇತೃತ್ವವನ್ನುವಹಿಸಿದ್ದರು.
ಬಂಧಿಸಲಾದ ಕಾರ್ಮಿಕರನ್ನು ಮುಂದಿನ ಕ್ರಮ ಜರಗಿಸಿಲಿಕ್ಕಾಗಿ ಪ್ರಾಸಿಕ್ಯೂಷನ್‌ಗೆ ಹಸ್ತಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.