×
Ad

ಆಹಾರ ಪೋಲು: ಸೌದಿ ಅರೇಬಿಯಕ್ಕೆ ಪ್ರಥಮ ಸ್ಥಾನ

Update: 2017-03-04 16:59 IST

ರಿಯಾದ್,ಮಾ. 4: ಆಹಾರ ಪೋಲು ಮಾಡುವುದರಲ್ಲಿ ಸೌದಿ ಅರೇಬಿಯ ಪ್ರಥಮ ಸ್ಥಾನದಲ್ಲಿದೆಯೆಂದು ಅಧ್ಯಯನ ವರದಿ ತಿಳಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿ ಈ ಪಟ್ಟಿಗೆ ಸೇರಿದ ಯುಎಇ ನಾಲ್ಕನೆ ಸ್ಥಾನದಲ್ಲಿದೆ.

ಜಗತ್ತಿನ ವಿವಿಧ ಭಾಗಗಳಲ್ಲಿಹಸಿವು, ಪೋಷಕಾಹಾರದ ಕೊರತೆಯಿಂದ ಬಳಲುತ್ತಿರುವ ವೇಳೆ ಸೌದಿಯಲ್ಲಿ ಭಾರೀ ಪ್ರಮಾಣದಲ್ಲಿ ಆಹಾರಪೋಲು ಮಾಡಲಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. 

ಸೌದಿ ಅರೇಬಿಯದಲ್ಲಿ ಪ್ರತಿಯೊಬ್ಬರೂ ವರ್ಷದಲ್ಲಿ ಸರಾಸರಿ 427 ಕಿಲೊ ಆಹಾರ ಮಾಲಿನ್ಯದರಾಶಿಗೆ ಚೆಲ್ಲುತ್ತಿದ್ದಾರೆ. ಮದುವೆ, ಉತ್ಸವ, ಔತಣಕೂಟಗಳಲ್ಲಿ ಶೇ.90ರಷ್ಟು ಆಹಾರ ಹಾಳಾಗುತ್ತಿದೆ. ವಿವಿಧ ಚ್ಯಾರಿಟಿ ಸಂಸ್ಥೆಗಳು ಅಲ್ಲಿದ್ದರೂ ಆಹಾರವನ್ನು ಪಡೆದು ವಿತರಿಸುವಂತಹ ಚ್ಯಾರಿಟಿ ಸಂಸ್ಥೆಗಳು ಅಲ್ಲಿ ಹೆಚ್ಚಿಲ್ಲ. ಆಹಾರ ಹಾಳಾಗದಂತೆ ನೋಡಿಕೊಂಡು ಮರು ಬಳಕೆ ಮಾಡುವ ದೇಶಗಳಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಅನುಕ್ರಮವಾಗಿ ಫ್ರಾನ್ಸ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಪಡೆದಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News