×
Ad

ಕುವೈಟ್‌ನಲ್ಲಿ ಭಾರತದ ವ್ಯಕ್ತಿ ನಿಗೂಢ ಸಾವು

Update: 2017-03-04 17:12 IST

ಕುವೈಟ್,ಮಾ.4: ಕುವೈಟ್‌ನಲ್ಲಿ ಕೇರಳ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಾವಕ್ಕಾಡ್ ಎಡಕ್ಕಯಿಯೂರ್‌ನ ರಿಯಾಝ್ (32) ವಾಸವಿದ್ದ ಸ್ಥಳದ ಕಟ್ಟಡದಿಂದ ಕೆಳಗೆ ಬಿದ್ದು ಮೃತನಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಅದೇವೇಳೆ, ರಿಯಾಝ್ ರ ಸಾವು ಕೊಲೆ ಎಂದು ಅರೋಪಿಸಿ ಸಂಬಂಧಿಕರು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಮುಖ್ಯಮಂತ್ರಿಯ ಕಚೇರಿ ಅದನ್ನು ಮುಂದಿನ ಕ್ರಮಕ್ಕಾಗಿ ಅಡಿಶನಲ್ ಚೀಫ್ ಸೆಕ್ರೆಟರಿಗೆ ಕಳುಹಿಸಿಕೊಟ್ಟಿದೆ. ಪ್ರಾಯೋಜಕ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆಮಾಡಿದ್ದಾನೆ ಎಂದು ರಿಯಾಝ್ ವಾಸವಿದ್ದ ಕಟ್ಟಡದ ಸಮೀಪದ ನಿವಾಸಿಗಳು ಹಾಗೂ ಗೆಳೆಯರು ತಿಳಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

ರಿಯಾಝ್ ಅಹ್ಮದಿಯದ ಸೌದಿ ಪ್ರಜೆಯ ಮನೆ ಚಾಲಕನಾಗಿರಿಯಾಝ್ ದುಡಿಯುತ್ತಿದ್ದರು. ರಿಯಾಝ್ ಗುರುವಾರ ಬೆಳಗ್ಗೆ ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು.ಗುರವಾರ ಮಧ್ಯಾಹ್ನದ ವೇಳೆ ಸಾವು ಸಂಭವಿಸಿದೆ. ರಿಯಾಝ್ ಮನೆಯ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆಂದು ಪ್ರಾಯೋಜಕ ಪೊಲೀಸರಿಗೆ ಸಾಕ್ಷ್ಯ ಹೇಳಿದ್ದಾನೆ. ಪ್ರಾಯೋಜಕ ರಿಯಾಝ್ ರನ್ನು ಕೊಂದು ಮಹಡಿಯಿಂದ ಕೆಳಗೆ ದೂಡಿ ಹಾಕಲಾಗಿದೆ ಎಂದು ರಿಯಾಝ್ ನ ಗೆಳೆಯರು ಸಂಬಂಧಿಕರಿಗೆ ತಿಳಿಸಿದ್ದಾರೆ.

ಪೊಲೀಸ್ ಕೇಸುದಾಖಲಿಸಿದೆ. ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆ ಮುಂದುವರಿಯುವಾಗ ಘಟನೆಯ ಕುರಿತು ಸ್ಪಷ್ಟ ಚಿತ್ರಣ ದೊರೆಯಬಹುದೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News