ರಿಯಾದ್: ಕೆಸಿಎಫ್ ಸೌದಿ ಅರೇಬಿಯಾ ರಾಷ್ಟೀಯ ಮಟ್ಟದ ಸದಸ್ಯತ್ವ ಅಭಿಯಾನ ಉದ್ಘಾಟನಾ ಸಮಾರಂಭ
ರಿಯಾದ್, ಮಾ.4: ಕೆಸಿಎಫ್ ಸೌದಿ ಅರೇಬಿಯಾ ರಾಷ್ಟೀಯ ಮಟ್ಟದ ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಮಾರಂಭವು ರಿಯಾದ್ ನ ಕೆಸಿಎಫ್ ಸೆಂಟರ್ನಲ್ಲಿ ಮಾ.3ರಂದು ಶುಕ್ರವಾರ ನಡೆಯಿತು.
ಕೆಸಿಎಫ್ INC ಸದಸ್ಯ ನಝೀರ್ ಕಾಸಿಪಟ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೆ.ಸಿಎಫ್ ರಾಷ್ಟೀಯ ಸಮಿತಿ ಸಂಘಟನಾ ಚೆಯರ್ ಮೆನ್ ಸಿದ್ದೀಕ್ ಸಖಾಫಿ ಪೆರುವಾಯಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಅಹ್ಲ್-ಸುನ್ನತ್ ವಲ್ ಜಮಾಅದ ವ್ಯಕ್ತಿಗಳನ್ನು ಕೆಸಿಎಫ್ ಸದಸ್ಯರನ್ನಾಗಿ ಮಾಡಲು ಎಲ್ಲಾ ಕಾರ್ಯಕರ್ತರು ಕ್ರಿಯಾತ್ಮಕವಾಗಿ ಕಾರ್ಯಚರಿಸಬೇಕೆಂದು ಹೇಳಿದರು.
ಕೆಸಿಎಫ್ ರಾಷ್ಟೀಯ ಸಮಿತಿ ಕೋಶಾದಿಕಾರಿ ಫಾರೂಕ್ ಅಬ್ಬಾಸ್ ಉಳ್ಳಾಲ "ಜೀವನ ನಾಡಿಗಾಗಿ ನಾಳೆಗಾಗಿ" ಎಂಬ ಘೋಷ ವಾಕ್ಯ ಮೊಳಗಿಸಿದರು.
ಕೆಸಿಎಫ್ ರಾಷ್ಟೀಯ ಸಮಿತಿ ಸದಸ್ಯ ಇಸ್ಮಾಯಿಲ್ ಕನ್ನಂಗಾರ್ ಆಶಂಸೆ ಭಾಷಣ ಮಾಡಿದರು. ಇಸ್ಮಾಯಿಲ್ ಜೋಗಿಬೆಟ್ಟು ಧನ್ಯವಾದ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಕೆಸಿಎಫ್ ರಾಷ್ಟೀಯ ರಿಲೀಫ್ ಚೆಯರ್ ಮೆನ್ ಸಲೀಂ ಕನ್ಯಾಡಿ ಸ್ವಾಗತಿಸಿದರು. ಅಬ್ದುಲ್ ರಶೀದ್ ಮದನಿ ಉರುವಾಲುಪದವು ಕಿರಾಅತ್ ಪಠಿಸಿದರು. ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.