ದುಬೈ: ಶಹಾಬುದ್ದೀನ್ ನಿಧನಕ್ಕೆ ಇಐಎಫ್‌ಎಫ್ ಸಂತಾಪ
Update: 2017-03-06 21:49 IST
ದುಬೈ,ಮಾ.6: ಮಾಜಿ ಸಂಸದ ಕೆ.ಶಹಾಬುದ್ದೀನ್ ಅವರ ನಿಧನಕ್ಕೆ ಯುಎಇಯ ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫೋರಂ (ಇಐಎಫ್‌ಎಫ್) ತನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದೆ.
2008, ಜನವರಿ 26ರಂದು ಭಾರತೀಯ ಗಣತಂತ್ರ ದಿನಾಚರಣೆ ಸಂದರ್ಭ ತನ್ನ ಉದ್ಘಾಟನೆ ವೇಳೆ ದಿ.ಶಹಾಬುದ್ದೀನ್ ಅವರ ಉಪಸ್ಥಿತಿಯನ್ನು ಇಐಎಫ್‌ಎಫ್ ಸ್ಮರಿಸಿಕೊಂಡಿದೆ.
ರಾಜತಾಂತ್ರಿಕ,ರಾಯಭಾರಿ ಮತ್ತು ರಾಜಕಾರಣಿಯಾಗಿ ಬಹುಮುಖಿ ಕರ್ತವ್ಯ ನಿರ್ವಹಿಸಿದ್ದ ಶಹಾಬುದ್ದೀನ್ ಅವರು ಭಾರತೀಯ ಮುಸ್ಲಿಮರ ಸಬಲೀಕರಣಕ್ಕೆ ದುಡಿದಿದ್ದರು. ಹಲವಾರು ಮುಸ್ಲಿಮ್ ಸಂಸ್ಥೆಗಳು ಮತ್ತು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು ಎಂದಿರುವ ಇಐಎಫ್‌ಎಫ್,ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಕೋರಿದೆ.