×
Ad

ಬಹರೈನ್‌ನಲ್ಲಿ ಭಾರತದ ವ್ಯಕ್ತಿಯ ದರೋಡೆ

Update: 2017-03-07 14:23 IST

ಮನಾಮ,ಮಾ.7: ಮನಾಮದ ಬಸ್‌ಸ್ಟಾಂಡ್ ಸಮೀಪ ಕೇರಳದ ವ್ಯಕ್ತಿಯೊಬ್ಬರನ್ನು ಕಳೆದ ದಿವಸ ರಾತ್ರಿ ಒಂಬತ್ತೂವರೆ ಗಂಟೆಯ ವೇಳೆಗೆ ದೋಚಲಾಗಿದೆ.

ಸಿತ್ರ ಇಂಡಸ್ಟ್ರಿಯಲ್ ಏರಿಯದ ವೇರ್ ಹೌಸ್‌ನಲ್ಲಿ ಕೆಲಸ ಮಾಡುವ ಬಿನು ಜೈದೇವ್ ಮರಳಿ ಹೋಗಲು ಟ್ಯಾಕ್ಸಿಚಾಲಕನಿಗೆ ಚಿಲ್ಲರೆ ತೆಗೆದು ಕೊಡುತ್ತಿದ್ದ ವೇಳೆ ಹಿಂದಿನ ಬಂದ ವ್ಯಕ್ತಿಯೊಬ್ಬ ಪರ್ಸನ್ನು ಕಿತ್ತು ಕೊಂಡು ಓಡಿಹೋಗಿದ್ದಾನೆ.

ಬಿನು ಬೊಬ್ಬೆ ಹಾಕಿದರೂ ದಟ್ಟ ಕತ್ತಲಿನಲ್ಲಿ ಪರ್ಸ್‌ಕಳ್ಳ ತಪ್ಪಿಸಿಕೊಂಡಿದ್ದಾನೆ. ಬಿನು ಕೂಡಲೇ ಪೊಲೀಸರಿಗೆ ಕರೆ ಮಾಡಿ ತನ್ನ ಪರ್ಸ್ ದರೋಡೆಯಾದ ವಿಷಯವನ್ನು ತಿಳಿಸಿದರು. ಮರುದಿವಸ ನಈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಬಿನು ಬಹರೈನ್‌ಗೆ ಬಂದು ನಾಲ್ಕು ತಿಂಗಳಷ್ಟೇ ಆಗಿದೆ. ಪರ್ಸ್‌ನಲ್ಲಿ ಎಟಿಎಂ ಕಾರ್ಡ್, ಸಿಪಿಆರ್ ದಾಖಲೆ ಸಹಿತ ಅರುವತ್ತು ದೀನಾರ್ ಇತ್ತು. ಮನಾಮದಲ್ಲಿ ಪಾಕೆಟ್ ಕಳ್ಳತನ, ದೋಚಿದ ಘಟನೆಗಳು ಈ ಹಿಂದೆಯೂ ನಡೆದಿವೆ.

ಕೇಂದ್ರ ಮಾರ್ಕೆಟ್‌ನ ಉದ್ಯೋಗಿಯೊಬ್ಬರ ಪರ್ಸ್ ದೋಚಿದ ಘಟನೆ ಈ ಹಿಂದೆ ಮನಾಮದಲ್ಲಿ ನಡೆದಿದೆ. ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಈ ಹಿಂದೆ ಘೋಷಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News