ಒಮನ್: ಪ್ಲಾಸ್ಟಿಕ್ ಚೀಲ, ಆಹಾರದ ಪೆಟ್ಟಿಗೆ ನಿಷೇಧ ಪರಿಶೀಲನೆಯಲ್ಲಿ

Update: 2017-03-08 06:01 GMT

ಮಸ್ಕತ್,ಮಾ.8: ಒಮನ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಳು, ಆಹಾರದ ಪೊಟ್ಟಣಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆದಿದೆ. ಅವುಗಳಿಂದ ಸಾರ್ವಜನಿಕರಿಗೆ ಮತ್ತು ಪರಿಸರಕ್ಕೆ ಆಗುವ ಹಾನಿಗಳೇನು ಎಂದು ಸರಕಾರದ ವತಿಯಿಂದ ಅಧ್ಯಯನ ನಡೆಯುತ್ತಿದೆ ಎಂದು ಪರಿಸರ,ಹವಾಮಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲಾಗಿದೆ. ಈಗ ರಾಜ್ಯದಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್‌ನ ಪ್ರಮಾಣವನ್ನು ಲೆಕ್ಕಮಾಡಲು ಅಧ್ಯಯನ ಸಹಾಯಕವಾಗುತ್ತದೆ.

ಆಹಾರವಸ್ತುಗಳನ್ನು ಕೊಂಡುಹೋಗಲು ಮತ್ತು ಅದನ್ನು ಸುರಕ್ಷಿತವಾಗಿಡಲು ಬಳಸುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವ ಬಗ್ಗೆ 2013ರಲ್ಲಿಯೇ ಪ್ರಯತ್ನಗಳು ಆರಂಭವಾಗಿದ್ದವು. ಈಗ ಪ್ಲಾಸ್ಟಿಕ್‌ಗೆ ಸಂಪೂರ್ಣ ನಿಷೇಧ ಹೇರಲು ಪರಿಶೀಲನೆ ನಡೆಯುತ್ತಿದೆ.

ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಸರಕಾರಕ್ಕೆ ಲಭಿಸಿದ ನಂತರ ಸಚಿವಾಲಯ ಕ್ರಮಕೈಗೊಳ್ಳಲಿದ್ದು, ಸಾರ್ವಜನಿಕರು ಹೊಟೇಲು, ಬೇಕರಿ, ಸೂಪರ್ ಮಾರ್ಕೆಟ್‌ಗಳಿಂದ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ನೀಡುವ ಆಹಾರವಸ್ತುಗಳನ್ನು ಖರೀದಿಸಿ ಕೊಂಡುಹೋಗುತ್ತಿದ್ದಾರೆ. ಇದರಿಂದಾಗುವ ದುಷ್ಪರಿಣಾಮಗಳನ್ನು ಜನರು ಅರಿತಿಲ್ಲ.

ಆಹಾರವಸ್ತುಗಳು, ಪಾನೀಯಗಳು ಪ್ಲಾಸ್ಟಿಕ್ ಚೀಲ,ಬಾಟ್ಲಿಗಳಲ್ಲಿ ಇರಿಸುವಾಗ ಆಗುವ ಬಿಸಿಯಿಂದ ಪ್ಲಾಸ್ಟಿಕ್‌ನಿಂದ ರಾಸಾಯನಿಕ ವಸ್ತುಗಳು ಹೊರಬಂದು ಹಲವು ರೋಗಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನದಿಂದ ಈಗಾಗಲೇ ಸ್ಪಷ್ಟವಾಗಿದೆ. ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಅಂಧತ್ವ ಇತ್ಯಾದಿ ಸಮಸ್ಯೆಗಳು ಸೃಷ್ಟಿಯಾಗಬಹುದು. ಒಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸುವುದು ಒಮನ್‌ನ ಪರಿಸರ ಮತ್ತು ಹವಾಮಾನ ಸಚಿವಾಲಯದ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News