ಖತೀಫ್‌ನಲ್ಲಿ ಘರ್ಷಣೆ: ಭಯೋತ್ಪಾದಕನ ಎನ್‌ಕೌಂಟರ್

Update: 2017-03-11 11:47 GMT

ದಮ್ಮಾಮ್,ಮಾ.11: ಸೌದಿಅರೇಬಿಯದ ದಮ್ಮಾಮ್ ಸಮೀಪದ ಖತೀಫ್‌ನಲ್ಲಿ ಭದ್ರತಾಪಡೆ ಓರ್ವ ಭಯೋತ್ಪಾದಕನನ್ನು ಎನ್‌ಕೌಂಟರ್ ಮಾಡಿ ಕೊಂದುಹಾಕಿದೆ. ಹಲವು ಭಯೋತ್ಪಾದನಾ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ತಲೆತಪ್ಪಿಸಿಕೊಂಡಿದ್ದ ಆರೋಪಿ ಮುಸ್ತಫಾ ಅಲಿ ಅಬ್ದುಲ್ಲ ಅಲ್ ಮದಾದ್ ಎಂಬಾತನನ್ನು ಪೊಲೀಸರು ಘರ್ಷಣೆಯ ವೇಳೆ ಕೊಂದು ಹಾಕಿದ್ದಾರೆ.

ಒಬ್ಬ ಭದ್ರತಾ ಅಧಿಕಾರಿ ಘಟನೆಯಲ್ಲಿ ಗಾಯಗೊಂಡಿದ್ದಾರೆ.ಮುಸ್ತಫಾ ಅಲಿ ಅಬ್ದುಲ್ಲ ಅಲ್ ಮದಾದ್ ಕಳೆದ ಕೆಲವು ತಿಂಗಳಿಂದ ಸೌದಿ ಅರೇಬಿಯದ ಈ ವಲಯದಲ್ಲಿ ಹಲವಾರು ಭಯೋತ್ಪಾದಕ ದಾಳಿಯಲ್ಲಿ ಈತ ಮಖ್ಯ ಪಾತ್ರವಹಿಸಿದ್ದ ಎಂದು ಭದ್ರತಾಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆಯಾದ ಭಯೋತ್ಪಾದಕ ಅಲಿಗೆ ಭದ್ರತಾ ಪಡೆ ಅಧಿಕಾರಿಗಳ ಕೊಲೆ, ಜನಸಾಮಾನ್ಯರು, ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಮೇಲೆ ದಾಳಿ ಪಾಲ್ಗೊಂಡ ವ್ಯಕ್ತಿಯಾಗಿದ್ದಾನೆ. ಬಹಳ ದಿನದಿಂದ ಈತ ಪೊಲೀಸರ ಕೈಗೆ ಸಿಗದೆ ನುಣುಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.ಆದರೆ ಈತ ಅಡಗಿ ಕೂತ ತಾಣವನ್ನು ಪೊಲೀಸರ ಗುರುತಿಸಿ ಸುತ್ತುವರಿದಾಗ ಆತ ಗುಂಡುಹಾರಿಸಿದ್ದಾನೆ.

ಭದ್ರತಾ ಪಡೆಯ ಅಧಿಕಾರಿಗಳು ಕೂಡಾ ಗುಂಡು ಹಾರಿಸಿದ್ದು ಅಂತಿಮವಾಗಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಆತ ಸಾವನ್ನಪ್ಪಿದನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News