ದುಬೈ: ಅತ್ಯಾಚಾರ ಪ್ರಕರಣ :ಶಿಕ್ಷೆಯನ್ನು ದುಪ್ಪಟ್ಟುಗೊಳಿಸಿದ ನ್ಯಾಯಾಲಯ

Update: 2017-03-11 12:22 GMT

ದುಬೈ,ಮಾ.11: ಗೆಳತಿಯನ್ನು ಅತ್ಯಾಚಾರ ವೆಸಗಿ, ಫೋನ್ ಮತ್ತು ಕಾರ್ಡುಗಳಿದ್ದ ಬ್ಯಾಗನ್ನು ಬಲವಂತವಾಗಿ ಕಿತ್ತುಕೊಂಡ ಪ್ರಕರಣದ ಶಿಕ್ಷೆಯನ್ನು ಆರೋಪಿಗೆ ಅಪೀಲು ಕೋರ್ಟು ದುಪ್ಪಟ್ಟುಗೊಳಿಸಿ ತೀರ್ಪಿತ್ತಿದೆ. ಪಾಕಿಸ್ತಾನದ ವ್ಯಕ್ತಿ ಫಿಲಿಪ್ಪೀನ್ಸ್ ಗೆಳತಿಯನ್ನು ವಾಟ್ಸ್‌ಆ್ಯಪ್ ಮೂಲಕ ಗೆಳತನ ಮಾಡಿಕೊಂಡು ಬಳಿಕ ಲೈಂಗಿಕ ಕಿರುಕುಳವನ್ನು ನೀಡಿದ್ದ.

ಈತನಿಗೆ ಈ ಪ್ರಕರಣದಲ್ಲಿ ಕೆಳ ಕೋಟು ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈಗ ಅಪೀಲು ಕೋರ್ಟು ಪಾಕಿಸ್ತಾನಿ ವ್ಯಕ್ತಿಗೆ ಶಿಕ್ಷೆಯನ್ನು ದುಪ್ಪಟ್ಟುಗೊಳಿಸಿ ತೀರ್ಪುನೀಡಿದೆ. ಆರೋಪಿ 27 ವರ್ಷ ವಯಸ್ಸಿನ ಯುವಕನಾಗಿದ್ದಾನೆ.

ತಾನು ಅತ್ಯಾಚಾರ ಮಾಡಿಲ್ಲ. ಸಮ್ಮತದಿಂದ ನಾವು ಸೇರಿದ್ದೆವು. ಬ್ಲಾಕ್‌ಮೇಲ್ ಮಾಡಲಿಕ್ಕಾಗಿ ಫಿಲಿಪ್ಪೀನ್ಸ್ ಮಹಿಳೆ ತನ್ನ ಕಾರಿನಲ್ಲಿ ಅವಳ ಬ್ಯಾಗನ್ನು ಬಿಟ್ಟು ಹೋಗಿದ್ದಳು ಎಂದು ಅಪೀಲು ಕೋರ್ಟಿಗೆ ಪಾಕಿಸ್ತಾನಿ ಯುವಕ ಹೇಳಿದ್ದ.

ಆದರೆ ಫಿಲಿಪ್ಪೀನ್ಸ್ ಯುವತಿ ಪ್ರವಾಸಕ್ಕೆ ಕರೆದುಕೊಂಡು ಹೋದ ಯುವಕ ನಿರ್ಜನ ಪ್ರದೇಶದಲ್ಲಿ ತನ್ನನ್ನು ಹಿಡಿದು ಅತ್ಯಾಚಾರ ಮಾಡಿದ್ದಾನೆಂದು ಪ್ರಾಸಿಕ್ಯೂಶನ್ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದಳು. ಪೊಲೀಸರಿಗೆ ದೂರು ನೀಡದಂತೆ ತನ್ನ ಫೋನ್ ಮತ್ತು ಕಾರ್ಡನ್ನು ಕಿತ್ತುಕೊಂಡಿದ್ದ ಎಂದು ಆಕೆ ತಿಳಿಸಿದ್ದಳು.ಅತ್ಯಾಚಾರ ಮಾಡಿದ ಬಳಿಕ ಮುತ್ತೀನ ಎಂಬಲ್ಲಿ ಯುವಕ ಆಕೆಯನ್ನು ಕೆಳಗೆ ದೂಡಿ ಹಾಕಿ ಹೊರಟು ಹೋಗಿದ್ದ.

ಯುವತಿಯ ಅಳುವ ಧ್ವನಿ ಕೇಳಿ ಅಲ್ಲಿದ್ದ ಭದ್ರತಾ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ ಬಳಿಕ ಫಿಲಿಪ್ಪೀನ್ ಯುವತಿಯ ಬ್ಯಾಗ್ ಯುವಕನ ಕೊಠಡಿಯಿಂದ ವಶಪಡಿಸಿಕೊಂಡಿದ್ದರು. ಯುವತಿ ತೊಟ್ಟಿದ್ದ ಬಟ್ಟೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಹತ್ತುವರ್ಷ ಜೈಲು ಶಿಕ್ಷೆ ಮುಗಿದ ಬಳಿಕ ಈತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗುವುದು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News