×
Ad

ತಬೂಕ್: ದಾರುನ್ನೂರು ತಬೂಕ್ ಘಟಕ ಇದರ ಎರಡನೇ ವಾರ್ಷಿಕ ಮಹಾ ಸಭೆ; ಮುಸ್ತಫಾ ಪೆರಾಡಿ ಅಧ್ಯಕ್ಷರಾಗಿ ಪುನರಾಯ್ಕೆ

Update: 2017-03-11 18:06 IST

ತಬೂಕ್, ಮಾ.11: ಸೌದಿ ಅರೇಬಿಯಾದ ತಬೂಕಿನಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರು ಎಜ್ಯುಕೇಷನ್ ಸೆಂಟರ್ ತಬೂಕ್ ಘಟಕ ಇದರ ಎರಡನೇ ವಾರ್ಷಿಕೋತ್ಸವ ಹಾಗೂ ನೂತನ ಸಮೀತಿಯ ರಚನಾ ಕಾರ್ಯಕ್ರಮವು ದಿನಾಂಕ ಮಾ.9ರಂದು ಮುನೀರ್ ಮೂಡಬಿದ್ರೆ ಇವರ ವಸತಿ ಗೃಹದಲ್ಲಿ ಜರುಗಿತು. 

ಅಬ್ದುಲ್ ರಹಿಮಾನ್ ದಾರಿಮಿ ಕಿನ್ಯ ದುಆ ನೆರವೇರಿಸಿದರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಉಸ್ತಾದ್ ಹಕೀಂ ದಾರಿಮಿ ಕನ್ನಡಿಕಟ್ಟೆ  ಮಾಡಿದರು. ಕೆಎಂಸಿಸಿ ತಬೂಕ್ ಘಟಕದ ಅಧ್ಯಕ್ಷರಾದ ಬಶೀರ್ ಕೂಟಾಯಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾರುನ್ನೂರು ತಬೂಕ್  ಇದರ ಅಧ್ಯಕ್ಷರಾದ ಮುಸ್ತಫಾ ಪೆರಾಡಿ ಅಧ್ಯಕ್ಷ  ಭಾಷಣ ಮಾಡಿದರು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಅಬ್ದುಲ್ ಲೆತೀಫ್ ಉಪ್ಪಿನಂಗಡಿ ಅಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಂ ತಬೂಕ್ ಘಟಕ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕರಾಯ ಅಧ್ಯಕ್ಷರು, ಕರ್ನಾಟಕ ಪೌಂಡೇಶನ್ ತಬೂಕ್ ಘಟಕ, ಮುನೀರ್ ಮೂಡಬಿದ್ರೆ ಅಧ್ಯಕ್ಷರು ಸುನ್ನಿ ಸೆಂಟರ್ ತಬೂಕ್ ಘಟಕ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿ ಶುಭ ಹಾರೈಸಿದರು.

ಒಂದೇ ವೇದಿಕೆಯಲ್ಲಿ ಹಲವು ಸಂಘ ಸಂಸ್ಥೆಗಳ ನೇತಾರರು ಭಾಗವಹಿಸಿದ್ದರಿಂದ ಇದು ಒಂದು ಐಕ್ಯತೆಯ ಸಮಾರಂಭವಾಗಿ ಮಾರ್ಪಟ್ಟಿತ್ತು.

ವಾರ್ಷಿಕ ಸಭೆಯ ಬಳಿಕ ನೂತನ ಸಮಿತಿ  ರಚನೆಯ  ಚುಣಾವಣಾ ಅಧಿಕಾರಿಯಾಗಿ ಆಗಮಿಸಿ ಇಂಡಿಯನ್ ಫ್ರೆಟರ್ನಿಟಿ ಫೋರಂ ಇದರ ಅಧ್ಯಕ್ಷರಾದ ಅಬ್ದುಲ್ ಮಜೀದ್ ವಿಟ್ಲ ರವರು ಸಹಕರಿಸಿದರು.

25 ಜನರ ನೂತನ ಸಮೀತಿಯನ್ನು ರಚಿಸಿದ ಬಳಿಕ ಮತದಾನದ ಮೂಲಕ ಅಧ್ಯಕ್ಷರಾಗಿ ಮುಸ್ತಪಾ ಮುಸ್ಲಿಯಾರ್ ಪೆರಾಡಿ ಎರಡನೇ ಬಾರಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಅಬ್ದುಲ್ ಲೆತೀಫ್ ಉಪ್ಪಿನಂಗಡಿ, ಕೋಶಾಧಿಕಾರಿಯಾಗಿ ಅಯ್ಯೂಬ್ ಕಡಂಬು ಆಯ್ಕೆಗೊಂಡರು.

ಉಳಿದಂತೆ ಉಪಾಧ್ಯಕ್ಷರಾಗಿ ಅಬ್ದುಲ್  ಜಬ್ಬಾರ್ ಬಜ್ಪೆ,  ಶೇಖ್ ಅಬ್ದುಲ್ ರಹಿಮಾನ್, ಉಪ ಕಾರ್ಯದರ್ಶಿಯಾಗಿ ಉಸ್ತಾದ್ ಹಕೀಂ ದಾರಿಮಿ ಕನ್ನಡಿಕಟ್ಟೆ ಆಯ್ಕೆಗೊಂಡರು.  ಗೌರವಾಧ್ಯಕ್ಷರಾಗಿ ಉಮರ್ ವಳಚ್ಚಿಲ್ ಆಯ್ಕೆಗೊಂಡರು.

ಕಾರ್ಯಕ್ರಮವನ್ನು ನಿಝಾಮುದ್ದೀನ್ ಉಪ್ಪಿನಂಗಡಿ ನಿರೂಪಿಸಿದರು, ಬಶೀರ್ ಎನ್ಮಾಡಿ ಧನ್ಯವಾದ ಸಮರ್ಪಿಸಿದರು.

ವರದಿ : N.U.T  Tabuk

Writer - ಬದ್ರುದ್ದೀನ್ ಹೇಂತಾರ್

contributor

Editor - ಬದ್ರುದ್ದೀನ್ ಹೇಂತಾರ್

contributor

Similar News