×
Ad

ರಿಯಾದ್: ಕೆಸಿಎಫ್ ಮಲಾಝ್ ಸೆಕ್ಟರ್ ವಾರ್ಷಿಕ ಮಹಾಸಭೆ

Update: 2017-03-11 19:45 IST

ರಿಯಾದ್, ಮಾ.11: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಮಲಾಝ್ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಮಾ.3ರಂದು ಗುರುವಾರ ರಾತ್ರಿ 10:30 ಕ್ಕೆ ಮಲಾಝ್ ನಲ್ಲಿ  ನಡೆಯಿತು.

ಸಭೆಯ ಉದ್ಘಾಟನೆಯನ್ನು ಇಸ್ಮಾಯಿಲ್ ಮುಸ್ಲಿಯಾರ್ ಕಲ್ಮಿಂಜೆ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಿಯಾದ್ ಝೋನಲ್ ಸಂಘಟನಾ ಅಧ್ಯಕ್ಷ  ಸಿದ್ದೀಕ್ ಸಖಾಫಿ ಪೆರುವಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,  ಕಾರ್ಯಕರ್ತರು ತಮ್ಮ ದುಡಿಮೆಯ ಬಿಡುವಿನಲ್ಲಿ ನಾಡಿನ ಒಳಿತಿಗಾಗಿ ಕಾರ್ಯಾಚರಿಸಿ  ಕೆಸಿಎಫ್ ನ ಹೆಮ್ಮೆಯ ಕಾರ್ಯಕರ್ತರೆಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ಹೇಳಿದರು.

ಉತ್ತಮ ಗುಣನಡತೆಯೊಂದಿಗೆ ಆಧ್ಯಾತ್ಮಿಕ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿ ಇಹ-ಪರಲೋಕದಲ್ಲಿ ವಿಜಯಶಾಲಿ ಯಾಗಲು ಶ್ರಮಿಸಬೇಕೆಂದು 'ಜೀವನ ನಾಳೆಗಾಗಿ ನಾಡಿಗಾಗಿ' ಎಂಬ ವಿಷಯದ ಬಗ್ಗೆ ವಿವರಿಸುತ್ತಿದ್ದರು.

2015/16 ನೆ ಸಾಲಿನ ವರದಿ ಹಾಗೂ ಲೆಕ್ಕಪತ್ರವನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಝಹೀರ್ ಅಬ್ಬಾಸ್ ಉಳ್ಳಾಲ ಮಂಡಿಸಿದರು.  ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯ ಆಯ್ಕೆಯ ನೇತೃತ್ವವನ್ನು ರಿಯಾದ್ ಝೋನಲ್ ಸಂಘಟನಾ ಕನ್ವೀನರ್ ಇಸ್ಮಾಯಿಲ್ ಜೋಗಿಬೆಟ್ಟು ವಹಿಸಿದ್ದರು.

ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ನ, ರಿಯಾದ್ ಝೋನಲ್ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ಹಾಗೂ  ಬತ್ತಾ ಸೆಕ್ಟರ್ ಕಾರ್ಯದರ್ಶಿ ಬಶೀರ್ ತಲಪಾಡಿ ಆಶಂಸೆ ಭಾಷಣ ಮಾಡಿದರು.

ರಿಯಾದ್ ಝೋನಲ್ ಪ್ರ.ಕಾರ್ಯದರ್ಶಿ ಫಾರೂಕ್ ಅಬ್ಬಾಸ್ ಉಳ್ಳಾಲ್ ನೂತನ ಸಮಿತಿಗೆ ಶುಭ ಹಾರೈಸಿದರು.

ಮೊದಲಿಗೆ ಹನೀಫ್ ಮೋಂತಿಮಾರ್ ಕಿರಾಅತ್ ಪಠಿಸಿದರು. ಝಹೀರ್ ಅಬ್ಬಾಸ್ ಉಳ್ಳಾಲ್ ಸ್ವಾಗತಿಸಿದರು. ಸಂಶುದ್ದೀನ್ ಕೊಡಗು ವಂದಿಸಿದರು. ಹನೀಫ್ ಎನ್.ಎಸ್  ಕಾರ್ಯಕ್ರಮವನ್ನು ನಿರೂಪಿಸಿದರು.

2017/18 ನೇ ಸಾಲಿನ ನೂತನ ಸಮಿತಿಯ ವಿವರ:

ಅಧ್ಯಕ್ಷರು: ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ 
ಪ್ರ.ಕಾರ್ಯದರ್ಶಿ: ಝಹೀರ್ ಅಬ್ಬಾಸ್ ಉಳ್ಳಾಲ
ಕೋಶಾಧಿಕಾರಿ:  ಮನ್ಸೂರ್ ಪಡಿಕ್ಕಲ್ 
ಆರ್ಗನೈಝೇಶನ್ ಪ್ರೆಸಿಡೆಂಟ್: ಹನೀಫ್  ಎನ್.ಎಸ್
ಆರ್ಗನೈಝೇಶನ್ ಸೆಕ್ರೆಟರಿ: ಸಂಶುದ್ದೀನ್ ಕೊಡಗು
ನಾಲೆಡ್ಜ್ ಪ್ರೆಸಿಡೆಂಟ್: ಇಸ್ಮಾಯಿಲ್ ಮುಸ್ಲಿಯಾರ್ ಕಲ್ಮಿಂಜೆ
ನಾಲೆಡ್ಜ್ ಸೆಕ್ರೆಟರಿ: ಹನೀಫ್ ಮೋಂತಿಮಾರ್
ಅಡ್ಮಿನಿಸ್ಟ್ರೇಶನ್ ಪ್ರೆಸಿಡೆಂಟ್: ಇದ್ದಿಕುಂಞ ಸೆರಾಜೆ
ಅಡ್ಮಿನಿಸ್ಟ್ರೇಶನ್ ಸೆಕ್ರೆಟರಿ: ಬಶೀರ್ ಮೆದು
ವೆಲ್ಫೇರ್ ಪ್ರೆಸಿಡೆಂಟ್: ಯಾಸಿರ್ ಮೊಂಟೆಪದವು
ವೆಲ್ಫೇರ್ ಸೆಕ್ರೆಟರಿ: ಹಾಶಿಮ್  ಮೊಂಟೆಪದವು
ಪಬ್ಲಿಕೇಶನ್ ಪ್ರೆಸಿಡೆಂಟ್: ಅಬ್ದುಲ್ ಖಾದರ್ ಕೊಡಗು
ಪಬ್ಲಿಕೇಶನ್ ಸೆಕ್ರೆಟರಿ: ಫಾರೂಕ್ ಪಾನೇಲ
ಪದಾಧಿಕಾರಿಗಳು: ಫಾರೂಕ್ ಅಬ್ಬಾಸ್ ಉಳ್ಳಾಲ, ಅನ್ಸಾರ್ ಉಳ್ಳಾಲ, ಇಸ್ಮಾಯಿಲ್ ಕೈರಂಗಳ, ಬಶೀರ್ ಕೊಡಗು, ಇಬ್ರಾಹಿಂ ಉಳ್ಳಾಲ, ಮಜೀದ್ ಕಕ್ಕಿಂಜೆ, ನಿಝಾರ್ ಪಡಿಕ್ಕಲ್, ಶಾಹೀನ್ ಉಳ್ಳಾಲ, ಹನೀಫ್ ನೆಲ್ಯಾಡಿ, ಖಲಂದರ್ ಶಾಫಿ ಕಾವೂರು, ಸುಹೈಲ್ ಅಬ್ಬಾಸ್, ಬಶೀರ್ ಬಾಳೆಪುಣಿ                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News