ಉಮ್ರಾ ವೀಸಾ ಅವಧಿ ವಿಸ್ತರಣೆಗೆ ಶೂರಾ ಮಂಡಳಿ ಪರಿಶೀಲನೆ
Update: 2017-03-11 21:06 IST
ರಿಯಾದ್, ಮಾ. 11: ಉಮ್ರಾ ವೀಸಾ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸುವ ಪಸ್ತಾಪದ ಬಗ್ಗೆ ಶೂರಾ ಮಂಡಳಿಯು ಪರಿಶೀಲಿಸುತ್ತಿದೆ ಎಂದು ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ ಎಂದು ‘ಅಲ್ ವತನ್’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.
ವಿಸ್ತರಣೆ ಕೋರುವವರ ಆರ್ಥಿಕ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಿಸ್ತರಣೆ ನಡೆಸಬಹುದಾಗಿದೆ ಎಂದು ಮಂಡಳಿಯ ಹಣಕಾಸು ಸಮಿತಿಯ ಉಪಾಧ್ಯಕ್ಷ ಡಾ. ಫಹದ್ ಬಿನ್ ಜುಮಾ ಹೇಳಿದ್ದಾರೆ.
ವಿಸ್ತೃತ ಉಮ್ರಾ ವೀಸಾವು ಯಾತ್ರಿಕರು ಸ್ಥಳೀಯ ಪ್ರವಾಸೋದ್ಯಮ ಕೇಂದ್ರಗಳಿಗೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ ಹಾಗೂ ಇದು ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದರು.
ಇದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹುಟ್ಟಿಕೊಳ್ಳುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.