×
Ad

ದಮ್ಮಾಮ್: ಅಲ್ ಖಾದಿಸ ಕಾವಳ್ಕಟ್ಟೆ ವತಿಯಿಂದ "ಇಶ್ಕೆ ರಸೂಲ್ ಮಿಲಾಫ್-2017 ಕಾರ್ಯಕ್ರಮ"

Update: 2017-03-12 19:07 IST

ದಮ್ಮಾಮ್, ಮಾ.12: ದಕ್ಷಿಣ ಕನ್ನಡ ಜಿಲ್ಲೆಯ ಕಾವಳ್ಕಟ್ಟೆ ಎoಬಲ್ಲಿ  ಬಡವರಿಗೆ ನಿರ್ಗತಿಕರಿಗೆ ಆಶಾ ಕೇಂದ್ರವಾಗಿ ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವ ಅಲ್ ಖಾದಿಸ ಎಜುಕೇಷನಲ್ ಅಕಾಡಮಿ ಇದರ ದಮ್ಮಾಮ್ ಸಮಿತಿ ವತಿಯಿಂದ  ದಮ್ಮಾಮ್ ನ  ಅಲ್ ಖಯ್ಯಾಮ್ ಆಡಿಟೊರಿಯಂನಲ್ಲಿ 'ಇಶ್ಕೇ ರಸೂಲ್ ಮಿಲಾಫ್ - 2017' ಕಾರ್ಯಕ್ರಮ ಮತ್ತು ಸಮಿತಿಯ ವಾರ್ಷಿಕ ಸಭೆ ನಡೆಯಿತು.

ಕಾರ್ಯಕ್ರಮದ ಪ್ರಾರoಭದಲ್ಲಿ  ಬದರ್ ಮೌಲಿದ್ ಮತ್ತು ನಾಅತೆ ಶರಿಫ್ ನಡೆಯಿತು. ಮುಹಮ್ಮದ್ ಸಖಾಫಿ ತೆಲಕ್ಕಿ ಉಸ್ತಾದ್ ಕಿರಾಆತ್ ಪಟಿಸಿದರು. ತ್ವಾಹ ತಂಗಲ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ಅಧ್ಯಕ್ಷ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ ಕಟ್ಟೆ ಅಲ್ ಖಾದಿಸ ನಡೆಸುತ್ತಿರುವ ವಿದ್ಯಾಭ್ಯಾಸ ಮತ್ತು ಜೀವಕಾರುಣ್ಯ ಸೇವೆಯ  ಕುರಿತು ವಿವರಣೆ ನೀಡಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ  CM ಸೆಂಟರ್ ನಾರ್ವೆ ಇದರ ಅಧ್ಯಕ್ಷ ಬಾಷೀರ್ ಸಅದಿ ಉಸ್ತಾದ್ ಶುಭ ಹಾರೈಸಿದರು. ಸಮಿತಿಯ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರ‌ಧಾನ‌ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ನಾವುಂದ ಮಂಡಣೆ ಮಾಡಿದರು.

ಚುನಾವಣಧಿಕಾರಿಯಾಗಿ ಬಂದ ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ದಮ್ಮಾಮ್ ಹೊಸ ಸಮಿತಿಯನ್ನು ರಚಿಸಲು ನೇತೃತ್ವ ನೀಡಿದರು.

ನೂತನ ಸಮಿತಿಯ ಅಧಕ್ಷರಾಗಿ ಅಬೂಬಕ್ಕರ್ ರೈಸ್ಕೊ ಪಡುಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ನಾವುಂದ, ಕೋಶಾಧಿಕಾರಿ ಯಾಗಿ ಹನೀಫ್ ನಾಟೆಕಲ್, ಉಪಾಧ್ಯಕ್ಷಕರಾಗಿ ಅಬೂಬಕ್ಕರ್ ಕೋಡಿ, ಬದ್ರುದ್ದೀನ್ ರೈಸ್ಕೋ.ಶಾಹುಲ್ ಹಮೀದ್ ಉಜಿರೆ. ಆರ್ಗನೈಸರ್ ಗಳಾಗಿ ಫಾರೂಖ್ ಕಾಟಿಪಳ್ಳ, ಫೈಝಲ್ ಕೆ ಪುರ, ಫಾರೂಖ್ ಕಾಪು, ಮಿಡೀಯಾ ಕನ್ವೀನರ್ ಆಗಿ ತಮೀಮ್ ಕೂಳೂರು. ಆಡಿಟರ್ ಆಗಿ ಸಯ್ಯೆದ್ ಬಾವಾ ಬಜ್ಪೆ ಆಯ್ಕೆಯಾದರು.

ಸಯ್ಯೆದ್ ಬಾವಾ ಕಾರ್ಯಕ್ರಮ  ನಿರೂಪಿಸಿದರು. ಹನೀಫ್ ನಾಟೆಕಲ್ ಸ್ವಾಗತಿಸಿ  ಫೈಝಲ್ ಕೆ ಪುರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News