ಸೌದಿ: ನಕಲಿ ವಸ್ತುಗಳ ಜಾಹೀರಾತು; 75 ಸಾಮಾಜಿಕ ಮಾಧ್ಯಮ ಖಾತೆಗಳು ಬಂದ್

Update: 2017-03-12 15:52 GMT

ರಿಯಾದ್, ಮಾ. 12: ನಕಲಿ ವಸ್ತುಗಳಿಗಾಗಿ ಸಾವಿರಾರು ಜಾಹೀರಾತುಗಳನ್ನು ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ಸ್ನಾಪ್‌ಚಾಟ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ 75ಕ್ಕೂ ಅಧಿಕ ಖಾತೆಗಳನ್ನು ವ್ಯಾಪಾರ ಮತ್ತು ಉದ್ದಿಮೆ ಸಚಿವಾಲಯ ಮುಚ್ಚಿದೆ ಎಂದು ‘ಅಲ್-ಜಝೀರಾ’ ಪತ್ರಿಕೆ ಶನಿವಾರ ವರದಿ ಮಾಡಿದೆ.  

ಈ ಖಾತೆಗಳ ಸುಮಾರು 15 ಲಕ್ಷ ಅನುಯಾಯಿಗಳು ನಕಲಿ ಜಾಹೀರಾತುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ತಪ್ಪಿಸಲು ತಾನು ಈ ಕ್ರಮ ತೆಗೆದುಕೊಂಡಿರುವುದಾಗಿ ಸಚಿವಾಲಯ ತಿಳಿಸಿದೆ.

ಇಂಥ ಡಝನ್‌ಗಟ್ಟಳೆ ಖಾತೆಗಳು ನಿಯಮಿತವಾಗಿ ವಂಚನಾ ಜಾಹೀರಾತುಗಳನ್ನು ಹಾಕುತ್ತಿರುತ್ತವೆ. ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವ ಜಾಹೀರಾತುಗಳು, ಅದರಲ್ಲೂ ಮುಖ್ಯವಾಗಿ ಸಂಶಯಾಸ್ಪದ ಉತ್ಪನ್ನಗಳೆಂದು ಕಂಡುಬರುವ ಜಾಹೀರಾತುಗಳ ಮೇಲೆ ಸಚಿವಾಲಯ ನಿಗಾ ಇಡುತ್ತಿದೆ.

ಸಚಿವಾಲಯವು ಇ-ಕಾಮರ್ಸ್ ಕಾನೂನೊಂದರ ಕರಡು ಸಿದ್ಧಪಡಿಸಿದ್ದು, ಅದನ್ನು ಪರಿಣತರು ಅಧ್ಯಯನ ಮಾಡುತ್ತಿದ್ದಾರೆ ಎಂದು ಸಚಿವಾಲಯದಲ್ಲಿ ಗ್ರಾಹಕ ರಕ್ಷಣೆ ಅಧೀನ ಕಾರ್ಯದರ್ಶಿ ಫಹದ್ ಅಲ್-ಹಿತ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News