ಸಾಹಿತಿ ಯೋಗೇಶ್ ಮಾಸ್ಟರ್‌ಗೆ ಹಲ್ಲೆ; ರಿಯಾದ್ ಇಂಡಿಯನ್ ಸೋಶಿಯಲ್ ಫಾರಮ್ ಖಂಡನೆ
Update: 2017-03-13 17:21 IST
ರಿಯಾದ್, ಮಾ.13: ಖ್ಯಾತ ಸಾಹಿತಿ, ಚಿತ್ರ ನಿರ್ದೇಶಕ, ರಂಗಕರ್ಮಿ ಮತ್ತು ಪ್ರಗತಿಪರ ಚಿಂತಕ ಯೋಗೇಶ್ ಮಾಸ್ಟರ್ ಅವರ ಮೇಲಿನ ಹಲ್ಲೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿದ್ದು, ರಿಯಾದ್ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.
ಇದು ಕೇವಲ ಯೋಗೇಶ್ ಮಾಸ್ಟರ್‌ಗೆ ಆಗಿರುವ ಅವಮಾನವಲ್ಲ. ಪ್ರಗತಿಪರರು, ದಲಿತರು, ಸಾಹಿತಿಗಳಿಗೆ ಆಗಿರುವ ಅವಮಾನವಾಗಿದೆ. ವೈಚಾರಿಕತೆಯನ್ನು ಎದುರಿಸಲು ಸಾಧ್ಯವಾಗದೇ ಇಲ್ಲಿರುವ ಸಾಹಿತಿಗಳನ್ನು ನಿರಂತರವಾಗಿ ಧಮನಿಸಲು ಪ್ರಯತ್ನಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಕೂಡಲೇ ಸರಕಾರವು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಹಾಗೇ ಯೋಗೇಶ್ ಮಾಸ್ಟರ್ ಮತ್ತು ರಾಜ್ಯದ ಇತರ ಪ್ರಗತಿಪರ ಸಾಹಿತಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಸರಕಾರಕ್ಕೆ ಆಗ್ರಹಿಸಿದೆ.