ಉಮ್ರಾಕ್ಕೆ ತೆರಳಿದ ಭಾರತದ ವ್ಯಕ್ತಿ ಮದೀನದಲ್ಲಿ ನಿಧನ
Update: 2017-03-14 14:50 IST
ಮದೀನ,ಮಾ. 14: ಉಮ್ರಾಕರ್ಮ ಪೂರ್ತಿಗೊಳಿಸಿ ಮದೀನ ಸಂದರ್ಶನಕ್ಕೆ ತೆರಳಿದ ತೃಶೂರ್ ವರಂದರಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಮ್ರಾ ಗ್ರೂಪ್ ಅಮೀರ್ ಅಬ್ದುಲ್ ಖಾದರ್ ಫೈಝಿ(52)ಮದೀನದ ಕಿಂಗ್‌ಫೈಸಲ್ ಆಸ್ಪತ್ರೆಯಲ್ಲಿ ನಿಧನರಾದರು.
ಒಂದುತಿಂಗಳಹಿಂದೆ ರಕ್ತದೊತ್ತಡದಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತದೇಹ ಸಂಸ್ಕಾರವನ್ನುಜನ್ನತ್ತುಲ್ ಬಖಿಯಲ್ಲಿ ನೆರವೇರಿಸಲಾಗುವುದು ಎಂದು ವರದಿ ತಿಳಿಸಿದೆ.