ಯಮನ್: 2 ವರ್ಷಗಳ ಸಂಘರ್ಷಕ್ಕೆ 1,564 ಮಕ್ಕಳು ಬಲಿ: ಯುನಿಸೆಫ್

Update: 2017-03-14 13:59 GMT

ಆ್ಯಡನ್ (ಯಮನ್), ಮಾ. 14: ಯಮನ್ ಸಂಘರ್ಷದಲ್ಲಿ ಸೌದಿ ನೇತೃತ್ವದ ಮಿತ್ರ ಪಡೆಗಳು ಎರಡು ವರ್ಷಗಳ ಹಿಂದೆ ಸರಕಾರದ ಪರವಾಗಿ ಮಧ್ಯಪ್ರವೇಶಿಸಿದ ಬಳಿಕ ಕನಿಷ್ಠ 1,564 ಮಕ್ಕಳು ಸೇರಿದಂತೆ ಸುಮಾರು 7,700 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯನಿಸೆಫ್ ಹೇಳಿದೆ.

ಯಮನ್‌ನಲ್ಲಿ ಮಾರ್ಚ್ 10ರ ವೇಳೆಗೆ, ಕನಿಷ್ಠ 1,546 ಮಕ್ಕಳು ಮೃತಪಟ್ಟಿದ್ದಾರೆ ಹಾಗೂ 2,450 ಮಕ್ಕಳು ಅಂಗ ಊನಗೊಂಡಿದ್ದಾರೆ ಎಂದು ಅದು ತಿಳಿಸಿದೆ.

ಮೃತಪಟ್ಟ ಮಕ್ಕಳ ಪೈಕಿ 1,022 ಬಾಲಕರು ಹಾಗೂ 478 ಬಾಲಕಿಯರು ಎಂದು ಹೇಳಿರುವ ಯುನಿಸೆಫ್, 46 ಮಕ್ಕಳ ಗುರುತುಪತ್ತೆಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ 1,801 ಬಾಲಕರು ಮತ್ತು 649 ಬಾಲಕಿಯರು ಗಾಯಗೊಂಡಿದ್ದಾರೆ ಎಂದಿದೆ.ಅದೂ ಅಲ್ಲದೆ, 1,572 ಬಾಲಕರನ್ನು ಬಾಲ ಸೈನಿಕರಾಗಿ ನೇಮಕಗೊಳಿಸಲಾಗಿದೆ ಎಂದು ಯುನಿಸೆಫ್ ಹೇಳಿದೆ.

ಹುತಿ ಬಂಡುಕೋರರು 2014ರ ಸೆಪ್ಟಂಬರ್‌ನಲ್ಲಿ ರಾಜಧಾನಿ ಸನಾವನ್ನು ಆಕ್ರಮಿಸಿಕೊಂಡರು. ಆಗ ಅಧ್ಯಕ್ಷ ಮನ್ಸೂರ್ ಹದಿ ದಕ್ಷಿಣದ ನಗರ ಆ್ಯಡನ್‌ನಲ್ಲಿ ಆಶ್ರಯ ಪಡೆದರು. ಬಳಿಕ ಅವರು ನೆರೆಯ ಸೌದಿ ಅರೇಬಿಯಕ್ಕೆ ಪಲಾಯನಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News