ದಮ್ಮಾಮ್: ICF ಸೈಹಾತ್ ಘಟಕದ ನೂತನ ಸಮಿತಿ ರಚನೆ
ದಮ್ಮಾಮ್, ಮಾ.15: ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಆಫ್ ಇಂಡಿಯಾ(ICF) ಇದರ ಸೈಹಾತ್ ಘಟಕದ ವಾರ್ಷಿಕ ಕೌನ್ಸಿಲ್ ಕಳೆದ ಶುಕ್ರವಾರ ಜುಮಾ ಬಳಿಕ ಐಸಿಎಫ್ ಹಾಲ್ ಸೈಹಾತ್ ನಲ್ಲಿ ನಡೆಯಿತು.
ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ಸ್ವಾಗತಿಸಿದರು. ಈ ಸಭೆಯ ಉದ್ಘಾಟನೆಯನ್ನು ಮುಹಿಮ್ಮಾತ್ ಮುದರ್ರಿಸ್ ಮೂಸಾ ಸಖಾಫಿ ಕಳತ್ತೂರ್ ನಿರ್ವಹಿಸಿ ಸಂಘಟನೆಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಯಾವುದೇ ರೀತಿಯ ಸಂಘರ್ಷಗಳು ಬಂದರೂ ಸತ್ಯದೊಂದಿಗೆ ನೆಲೆಯೂರಬೇಕೆಂದು ಕರೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಐಸಿಎಫ್ ಅಧ್ಯಕ್ಷ ಸ್ವಾಲಿಹ್ ಪಯ್ಯನ್ನೂರ್ ವಹಿಸಿದ್ದರು. ಫಾರೂಕ್ ಮುಸ್ಲಿಯಾರ್ ಮತ್ತು ಸಂಘದಿಂದ ಕಳೆದ ಜನವರಿ 6ರಂದು ಸದಸ್ಯತ್ವ ಅಬಿಯಾನಕ್ಕೆ ಚಾಲನೆ ಸಿಕ್ಕಿತ್ತು.
ನಂತರ ವರದಿಯನ್ನು ಕಾರ್ಯದರ್ಶಿ ಪರವಾಗಿ ಅಬ್ಬಾಸ್ ತನ್ನಲೆ ಮತ್ತು ಲೆಕ್ಕಪತ್ರವನ್ನು ಅಬ್ದುಲ್ ಹಕೀಮ್ ತ್ರಿಸೂರ್ ವಾಚಿಸಿದರು.
ಚುನಾವಣಾ ಅಧಿಕಾರಿಯಾಗಿ ಬಂದ ಅನ್ವರ್ ಕಲರೋಡ್ ಮತ್ತು ರಫೀಕ್ ವಯನಾಡು ಹೊಸ ಸಮಿತಿಯನ್ನು ರಚನೆ ಮಾಡಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿದರು.
ನೂತನ ಸಮಿತಿ ಈ ಕೆಳಗಿನಂತಿವೆ :
ಅಧ್ಯಕ್ಷ: ಅಲವಿ ಹಾಜಿ ಮಂಜೇರಿ, ಪ್ರಧಾನ ಕಾರ್ಯದರ್ಶಿ: ಮುಸ್ತಫಾ ಪಾಲಾಯಿ, ಖಜಾಂಚಿ: ಷರೀಫ್ ಕುಟ್ಟಿಪ್ಪುರಂ, ದಅವಾ ಅಧ್ಯಕ್ಷ: ಇಸ್ಮಾಯಿಲ್ ಸಖಾಫಿ ಬಂಟ್ವಾಳ, ದಅವಾ ಕಾರ್ಯದರ್ಶಿ: ಕಾಸಿಂ ಇಯ್ಯಾಲ್, ವೆಲ್ಫೇರ್ ಅಧ್ಯಕ್ಷ: ಅಬ್ಬಾಸ್ ಇಯ್ಯಾಲ್, ವೆಲ್ಫೇರ್ ಕಾರ್ಯದರ್ಶಿ: ಅಬ್ದುಲ್ಲಾ ಕಾಂತಪುರಂ, ಪಬ್ಲಿಕೇಶನ್ ಅಧ್ಯಕ್ಷ: ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಪಬ್ಲಿಕೇಶನ್ ಕನ್ವಿನರ್: ಮಾಲಿಕ್ ಪೆರುಮಣ್ಣ.