ಈ ಔಷಧ ಯುಎಇ ಗೆ ತಂದರೆ ನಿಮಗೆ ಫಜೀತಿ ಖಚಿತ
ಅಬುಧಾಬಿ,ಮಾ. 15: ಫ್ಲೊಮಕ್ಸ್(Flomax) ಎನ್ನುವ ಔಷಧ ಯುಎಇಯಲ್ಲಿ ಲಭ್ಯವಿಲ್ಲ. ಈ ಔಷಧ ತರಿಸಲು ಅನುಮತಿ ಇಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಫ್ಲೊಮಕ್ಸ್(Flomax) ಔಷಧವನ್ನು ಯುಎಇಗೆ ತಂದರೆ ಪ್ರಯಾಣಿಕರು ಅದರಿಂದಾಗಿ ಅನುಭವಿಸಬಹುದಾದ ಪರಿಸ್ಥಿತಿಯ ಬಗ್ಗೆ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಜೊತೆ ಆರೋಗ್ಯ ಸಂಬಂಧಿಸಿದ ಔಷಧಗಳ ಯಾವುದೇ ವೀಡಿಯೊವನ್ನು ಪ್ರಚಾರ ಮಾಡಬಾರದೆಂದು ಎಲ್ಲರಿಗೂಸಚಿವಾಲಯ ಸೂಚನೆ ನೀಡಿದೆ.
ಪ್ಲೋಮಕ್ಸ್ ಯುಎಇಯಲ್ಲಿ ನೋಂದಣಿ ಮಾಡಿಲ್ಲ. ಆದ್ದರಿಂದ ಅದು ಯುಎಇಯಲ್ಲಿ ಸಿಗುವುದಿಲ್ಲ. 2015ರಲ್ಲಿ ಈಜಿಪ್ಟ್ ಪೊಲೀಸರು 60 ಲಕ್ಷ ಪ್ಲೊಮಕ್ಸ್(Flomax) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದರು ಎಂದು ಯುಎಇ ಆರೋಗ್ಯ ಸಚಿವಾಲಯದ ಡಾ. ಅಮೀನ್ ಹುಸೈನ್ ಅಲ್ ಅಮೀರಿ ತಿಳಿಸಿದ್ದಾರೆ. ಸರಕಾರ ಮತ್ತು ಆರೋಗ್ಯ ಸಚಿವಾಲಯದ ಅನುಮತಿಯಿಲ್ಲದ ಯಾವುದೇ ಔಷಧವನ್ನು ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದ್ದು ತಿಳಿದು ಬಂದರೆ ಕೂಡಲೇ ಸಚಿವಾಲಯಕ್ಕೆ ದೂರು ನೀಡಬೇಕೆಂದು ಡಾ. ಅಮೀನ್ ಹುಸೈನ್ ಅಲ್ ಅಮೀರಿ ಹೇಳಿದರು ಎಂದು ವರದಿಯಾಗಿದೆ.