ಕುವೈಟ್: ಪರವಾನಿಗೆ ಇಲ್ಲದ ಹಜ್ -ಉಮ್ರಾ ಕಚೇರಿಗಳ ವಿರುದ್ಧ ಕ್ರಮ
ಕುವೈಟ್ ಸಿಟಿ,ಮಾ. 15: ಪರವಾನಿಗೆ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಹಜ್-ಉಮ್ರಾ ಕಚೇರಿಗಳ ವಿರುದ್ಧ ವಕ್ಫ್(ಔಖಾಪ್) ಸಚಿವಾಲಯ ಕಠಿಣ ಕ್ರಮಕ್ಕೆ ಮುಂದಾಗಿದೆ.ಇಂತಹ ಕಚೇರಿಗಳಿಗೆ 50,000 ದೀನಾರ್ ದಂಡ, ಮಾಲಕನಿಗೆ ಒಂದು ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದು ಸಚಿವಾಲಯದ ತಪಾಸಣಾ ವಿಷಯಗಳ ಇಲಾಖೆಯ ಮುಖ್ಯಸ್ಥ ಮುಹಮ್ಮದ್ ಅಲ್ ಮುತೈರಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಕಚೇರಿಗಳು ಪ್ರತಿವರ್ಷವೂ ಹೊಸ ಪರವಾನಿಗೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ.
ಹಳೆಯ ಪರವಾನಿಗೆಯಲ್ಲಿಯೇ ಉಮ್ರಾಹಜ್ ವ್ಯವಹಾರವನ್ನು ಕುದುರಿಸಲು ಇಂತಹವರು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಪ್ರತಿವರ್ಷವೂ ಪರವಾನಿಗೆ ನವೀಕರಿಸುವಾಗ 500ದೀನಾರ್ ಸೆಕ್ಯುರಿ ಶುಲ್ಕವನ್ನು ಹಜ್ ಉಮ್ರಾ ಕಚೇರಿಗಳ ಮಾಲಕರು ಭರಿಸಬೇಕಾಗುತ್ತದೆ. ಪ್ರಯಾಣಿಕರ ಸುರಕ್ಷೆ, ವಾಸ, ಮರಳಿ ತಲುಪಿಸುವುದು ಉಮ್ರಾ ಹಜ್ ಕಚೇರಿಗಳ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಮುಹಮ್ಮದ್ ಅಲ್ ಮುತೈರಿ ಹೇಳಿದ್ದಾರೆಂದು ವರದಿ ತಿಳಿಸಿದೆ.