ಉಪ್ಪು ನೀರು ಶುದ್ಧೀಕರಣ ಕ್ಷೇತ್ರದಲ್ಲಿ ಲಂಕಾಗೆ ಸೌದಿ ನೆರವು

Update: 2017-03-15 14:45 GMT

ರಿಯಾದ್, ಮಾ. 15: ಉಪ್ಪು ನೀರು ಶುದ್ಧೀಕರಣ ಕ್ಷೇತ್ರದಲ್ಲಿ ಶ್ರೀಲಂಕಾಗೆ ನೆರವು ನೀಡಲು ಸೌದಿ ಅರೇಬಿಯ ಒಪ್ಪಿಕೊಂಡಿದೆ ಎಂದು ಶ್ರೀಲಂಕಾದ ನಗರ ಯೋಜನೆ ಮತ್ತು ಜಲಸಂಪನ್ಮೂಲಗಳ ಸಚಿವ ರವೂಫ್ ಹಕೀಮ್ ಹೇಳಿದ್ದಾರೆ.

ಹಕೀಮ್ ಸೌದಿ ಅರೇಬಿಯದ ಜಲಸಂಪನ್ಮೂಲಗಳ ಸಚಿವ ಅಬ್ದುಲ್ ರಹಮಾನ್ ಬಿನ್ ಅಬ್ದುಲ್ ಮೊಹ್ಸೀನ್ ಅಲ್-ಫಾದಿಲ್ ಅವರನ್ನು ಮಂಗಳವಾರ ರಿಯಾದ್‌ನಲ್ಲಿ ಭೇಟಿಯಾದರು.

‘‘ಸೌದಿ ಸಚಿವರೊಂದಿಗಿನ ಮಾತುಕತೆ ಉಪಯುಕ್ತ ಹಾಗೂ ಹಾರ್ದಿಕವಾಗಿತ್ತು. ಶ್ರೀಲಂಕಾ ಸರಕಾರ ಆರಂಭಿಸುವ ಉಪ್ಪು ನೀರು ಶುದ್ಧೀಕರಣ ಯೋಜನೆಗಳಿಗೆ ಸಂಬಂಧಿಸಿ ಸೌದಿ ಅರೇಬಿಯವು ತಾಂತ್ರಿಕ ಬೆಂಬಲ ಹಾಗೂ ಸಲಹೆ ನೀಡುವುದು’’ ಎಂದು ‘ಅರಬ್ ನ್ಯೂಸ್’ನೊಂದಿಗೆ ಮಾತನಾಡಿದ ಹಕೀಮ್ ಹೇಳಿದರು.

ದ್ವೀಪರಾಷ್ಟ್ರದ ಉತ್ತರ ಭಾಗದಲ್ಲಿರುವ ಜಾಫ್ನಾದಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ತನ್ನ ಸಚಿವಾಲಯವು ಈಗಾಗಲೇ ಟೆಂಡರ್‌ಗಳನ್ನು ಕರೆದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News